ಬೆಳಗಾವಿ:– ಇದು ನಿಜಕ್ಕೂ ಆಘಾತಕಾರಿ ಸಂಗತಿ ಮರ್ರೆ. ಇಷ್ಟು ದಿನ ಬಳ್ಳಾರಿ ಜಿಲ್ಲಾಸ್ಪತ್ರೆಯ ದುಸ್ಥಿತಿ ಬಗ್ಗೆ ಹೇಳ್ತಿದ್ವಿ. ಇದೀಗ ಬೆಳಗಾವಿ ಬಗ್ಗೆ ಹೇಳುವಂತಾಗಿದೆ.
ಬಾಣಂತಿಯರ ಸಾವಿಗೆ ಇದು ಕಾರಣ: ಅಸಲಿ ವಿಚಾರ ಬಿಚ್ಚಿಟ್ಟ ಪ್ರಹ್ಲಾದ್ ಜೋಶಿ!
ಎಸ್, ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 322 ಶಿಶುಗಳ ಹಾಗೂ 29 ಬಾಣಂತಿಯರ ಸಾವು ಸಂಭವಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಆಘಾತಕಾರಿ ವಿಚಾರ ತಕ್ಷಣವೇ ತನಿಖೆಯಾಗಬೇಕು ಎಂದು ವಿಪಕ್ಷದವರು ಹೇಳುತ್ತಿದ್ದಾರೆ.
322 ಶಿಶುಗಳ ಹಾಗೂ 29 ಬಾಣಂತಿಯರ ಮರಣ, ಈ ಸಾವು ನ್ಯಾಯವೇ? ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೊಬ್ಬರಿ 322 ಶಿಶುಗಳು ಹಾಗೂ 29 ಬಾಣಂತಿಯರು ಸಾವನ್ನಪ್ಪಿದ ಘಟನೆಯಿಂದ ಆರೋಗ್ಯ ಇಲಾಖೆ ಅಧಿಕಾರಿ ಹಾಗು ಸಿಬ್ಬಂದಿ ಹೈರಾಣಾಗಿದ್ದಾರೆ. ಸರಣಿ ಮಕ್ಕಳ ಸಾವುಗಳು ಸುದ್ದಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಶಿಶುಗಳ ಮರಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಆಡಿಟ್ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಆರೋಗ್ಯ ಇಲಾಖೆಯ ಪ್ರಭಾರಿ ಡಿಹೆಚ್ಒ ಗಡೇದ ತಿಳಿಸಿದ್ದಾರೆ.
ಒಂದೆಡೆ 322 ಶಿಶುಗಳ ಮರಣ ಇನ್ನೊಂದೆಡೆ 29 ಬಾಣಂತಿಯರ ಸಾವು ಇಲಾಖೆಯ ಕಾರ್ಯ ವೈಖರಿ ಮೇಲೆ ಸಂಶಯ ಹುಟ್ಟು ಹಾಕಿದೆ. ಕೆಲ ವೈದ್ಯರು ಈ ಅಂಕಿ – ಅಂಶ ಇನ್ನೂ ಹೆಚ್ಚು ಇದೆ ಎಂದು ಗುಸು ಗುಸು ಎನ್ನುತ್ತಿದ್ದಾರೆ.