ಬೆಂಗಳೂರು: ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಲತಂದೆಯೇ ತನ್ನ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ. ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ ಮಲ್ಲಸಂದ್ರದ ನಿವಾಸಿ ಸಂತೋಷ್ ಇಂಥ ಕೃತ್ಯವೆಸಗಲಾಗಿದ್ದಾನೆ. ಮಕ್ಕಳು ಹೇಳಿದ ಮಾತು ಕೇಳಲ್ಲ 9 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಗಂಡು ಮಗುವಿಗೆ ಹೀಟರ್ನಿಂದ ಬರೆ ಎಳೆದಿದ್ದಾನೆ. ಇದರಿಂದಾಗಿ ಮಕ್ಕಳಿಗೆ ಗಾಯಗಳಾಗಿದ್ದು, ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಧುಗಿರಿ ಮೂಲದ ಸಂತೋಷ್ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಸಂತೋಷ್ ಟವರ್ ಮೆಕ್ಯಾನಿಕ್ ಆಗಿದ್ದು, ಆತನ ಪತ್ನಿ ಅಂಜಲಿ ಮೊಬೈಲ್ ಶಾಪ್ನಲ್ಲಿ ಪತ್ನಿ ಕೆಲಸ ಮಾಡುತ್ತಾರೆ. ಸಂತೋಷ್ದಿ ನ ನಿತ್ಯ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲಿ ಹಾಕುತ್ತಿದ್ದ ಎನ್ನಲಾಗುತ್ತಿದ್ದ. ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳು ರಕ್ಷಣೆ ಮಾಡಿದ್ದರೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜಲಿಗೆ 10 ವರ್ಷಗಳ ಹಿಂದೆ ಬಿಎಂಟಿಸಿ ಚಾಲಕ ಮುರಳಿ ಜೊತೆಗೆ ವಿವಾಹವಾಗಿತ್ತು. ಆದರೆ ಮೊದಲನೇ ಪತಿಗೆ ಡಿವೋರ್ಸ್ ನೀಡಿದ್ದ ಅಂಜಲಿ ಈ ಸಂತೋಷ್ನನ್ನು ಮದುವೆಯಾಗಿದ್ದರು.