ಶಿವಮೊಗ್ಗ: ಎಸ್.ಎಂ. ಕೃಷ್ಣ ಅವರು ಐಟಿ ಬಿಟಿ ಕಂಪನಿಗಳನ್ನು ತಂದು ಬೆಂಗಳೂರಿನ ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಅವರ ಅಗಲಿಕೆಯಿಂದ ನೋವಾಗಿದೆ. ಅವರು ಒಬ್ಬ ಸಜ್ಜನ ರಾಜಕಾರಣಿ ಆಗಿದ್ದರು. ಅವರ ಪತ್ನಿ ಪ್ರೇಮಾ ತೀರ್ಥಹಳ್ಳಿಯವರು, ಅವರು ಇಲ್ಲಿನ ಅಳಿಯ. ಈ ಹಿನ್ನಲೆಯಲ್ಲಿ ನನ್ನ ಮೇಲೆ ವಿಶೇಷ ಪ್ರೀತಿ ಅವರಿಗೆ ಇತ್ತು ಎಂದಿದ್ದಾರೆ.
ಕ್ಷೇತ್ರದ ಯಾವುದೇ ಕಾಮಗಾರಿ ಇದ್ದರೂ ಅವರು ಅನುದಾನ ನೀಡುತ್ತಿದ್ದರು. ರಾಜ್ಯದ ಸಿಎಂ ಆಗಿ ಎಲ್ಲರೂ ನೆನಪು ಇರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರನ್ನು ಸಿಂಗಾಪುರ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಐಟಿ ಬಿಟಿ ಕಂಪನಿಗಳನ್ನು ತಂದು ಬೆಂಗಳೂರಿನ ಅಭಿವೃದ್ಧಿ ಮಾಡಿದ್ದಾರೆ.
Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ! ಕಷ್ಟಗಳು ಬೆನ್ನು ಬೀಳುತ್ತೆ
ಕೇಂದ್ರ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಕೃಷ್ಣ ಅವರು ಸೌಮ್ಯ ಸ್ವಭಾವದವರು. ಅವರನ್ನು ಕಳೆದುಕೊಂಡು ರಾಜ್ಯವು ಬಡವಾಗಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.