ಹುಬ್ಬಳ್ಳಿ: ಎಂಜಿಎಂವೈ ಯೋಜನೆ ಅಭಿವೃದ್ಧಿ ಕಾಮಗಾರಿ ಪೌರಾಡಳಿತದಿಂದ ಕರೆಯಲಾಗುತ್ತಿದೆ. ಇದು ಪಾಲಿಕೆ ಹಕ್ಕು ಕಸಿದು ಕೊಳ್ಳುವ ಕಾರ್ಯ ಆಗುತ್ತಿದೆ. ಅಲ್ಲದೇ ಪಾಲಿಕೆಯ ಅನುದಾನದಲ್ಲಿಯೂ ಬಹುದೊಡ್ಡ ತಾರತಮ್ಯ ಆಗುತ್ತಿದೆ. ಈಗಾಗಲೇ ಸರ್ಕಾರ 300 ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದ್ದು, ಮೇಯರ್ ಸಿಎಂಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಪಾಲಿಕೆಯ ಸಭಾನಾಯಕ ವೀರಣ್ಣ ಸವಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಾಲಿಕೆ 1974ರಲ್ಲಿ ಕಾಂಗ್ರೆಸ್ ನಾಯಕ ರಾಜೀವ ಗಾಂಧಿ ಸ್ಥಳಿಯ ಕಾಯ್ದೆ ಬಲಪಡಿಸಿದರು. ದುರಾದೃಷ್ಟವಶಾತ್ ಅಂದರೆ ಅದೇ ಪಕ್ಷದ ಸಿಎಂ, ಸಚಿವ ಭೈರತಿ ಸುರೇಶ ಪಾಲಿಕೆ ಬಲ ವಿಕ ಮಾಡುತ್ತಿದ್ದಾರೆ. ಯಾವುದೇ ಅನುದಾನ ಬಂದರೆ ಪಾಲಿಕೆಯಿಂದ ಟೆಂಡರ್ ಕರೆಯುವ ಪ್ರಕ್ರಿಯೆ ಇತ್ತು. ಸರ್ಕಾರ ಅನುದಾನ ಡಿಎಂಎ ಮುಖಾಂತರ ಕರೆಯಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.
ನಿಮಗೆ ಗೊತ್ತೆ..? ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಈ ಎಲೆಯಲ್ಲಿದೆ ಪರಿಹಾರ.!
ಯಾವುದೇ ಯೋಜನೆಯನ್ನು ಟೆಂಡರ್ ಕರೆಯಲು ಹಣವಿಲ್ಲ. ಹಣ ವಿಲ್ಲದೆ ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗಹಿಸುತ್ತಿಲ್ಲ. ನಮ್ಮ ಹಕ್ಕಿನ ಹಣ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಹೋರಾಟ ಮಾಡಲಾಗಿದೆ. ಅಧಿವೇಶನ ಮುಗಿವರೆಗೂ ಕಾಯುತ್ತೇವೆ. ಸಮಸ್ಯೆ ಬಗೆಹರಿಯದೇ ಇದ್ದರೇ ಸಿಎಂ ಅವರ ಮನೆ ಮುಂದೆ ಹೋರಾಟ ಮಾಡಲಾಗುವುದು. ಸಭಾಪತಿ ಬೆಲೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.