ಕೊಪ್ಪಳ:- ತುಂಗಭದ್ರಾ ಕ್ರೆಸ್ಟ್ ಗೇಟ್ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕ್ರೆಸ್ಟ್ ಗೇಟ್ ನಲ್ಲಿ ಆಗಿರುವ ಸರ್ಕಾರವೇ ನೇರವಾಗಿ ಹೊಣೆಯಾಗಿರುತ್ತದೆ, ಈ ಭಾಗದ ರೈತರಿಗೆ ಎದುರಾಗಿರುವ ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡಲೇ ಸ್ಪಂದಿಸಿ ಪ್ರತಿ ಹೆಕ್ಟೇರ್ ಗೆ ₹ 50,000 ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪಿಎಂ ಕಿಸಾನ್ನ 18ನೇ ಕಂತಿನ ಹಣ ಬರೋದು ಯಾವಾಗ: ಮೊಬೈಲ್ ಸಂಖ್ಯೆ ಈ ರೀತಿ ನವೀಕರಿಸಿ:
ಕಳೆದ ಒಂದು ವರ್ಷದಿಂದ ಟಿಬಿ ಡ್ಯಾಂ ನಿಗಮಕ್ಕೆ ಚೀಫ್ ಇಂಜಿನೀಯರ್ ನಿಯುಕ್ತಿ ಮಾಡದ ಕಾರಣ ಜಲಾಶಯದ ನಿರ್ವಹಣೆಯಲ್ಲಿ ತೊಡಕು ಉಂಟಾಗಿದೆ, ಇಂಜಿನೀಯರ್ ನಿಯುಕ್ತಿ ಆಗದಿರುವುದಕ್ಕೆ ಜನ ಏನೆಲ್ಲ ಮಾತಾಡಿಕೊಳ್ಳುತ್ತಿದ್ದಾರೆ, ಅವರ ಮಾತುಗಳನ್ನು ಉಲ್ಲೇಖಿಸಲು ಇದು ಸೂಕ್ತ ವೇದಿಕೆ ಅಲ್ಲ ಎಂದು ವಿಜಯೇಂದ್ರ ಹೇಳಿದರು.
ತಜ್ಞರು ನೀಡಿದ ಸಲಹೆಯನ್ನು ನಿರ್ಲಕ್ಷಿಸಿರುವ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ, ರೈತರ ನೆರವಿಗೆ ಅದು ಧಾವಿಸಬೇಕು ಎಂದರು.