ಕೋಲಾರ:- ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನದ ನೆಲದಲ್ಲಿ ಐಟಿ ಹಬ್ ಸೃಷ್ಟಿಸಲು ಸರ್ಕಾರ ಮುಂದಾಗಿದೆ.
23 ವರ್ಷಗಳ ನಂತರ ಈಗ ಚಿನ್ನದ ನೆಲದಲ್ಲಿ ಹೊಸ ಭರವಸೆಯೊಂದು ಮೂಡಿದ್ದು ಚಿನ್ನದ ನೆಲ ಸದ್ಯ ಐಟಿ ಹಬ್ ಆಗಿ ಹೊರ ಹೊಮ್ಮುವ ಕಾಲ ಸನ್ನಿಹಿತವಾಗುತ್ತಿದೆ.
ದರ್ಶನ್ ಗೆ ಪವಿತ್ರಾನೆ ವಿಲನ್: ದಾಸ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಾ!?
ಇಡೀ ವಿಶ್ವಕ್ಕೆ ನೂರಾರು ವರ್ಷಗಳ ಕಾಲ ತನ್ನೊಡಲಿಂದ ಚಿನ್ನವನ್ನು ಬಗೆದುಕೊಟ್ಟ ನೆಲ ಕೆಜಿಎಫ್. ಆದರೆ ಹಲವು ಕಾರಣಗಳಿಂದ ನಷ್ಟದ ನೆಪಪೊಡ್ಡಿ ಕೆಜಿಎಫ್ ಚಿನ್ನದ ಗಣಿಗೆ ಬೀಗ 23 ವರ್ಷಗಳ ಹಿಂದೆ ಬೀಗ ಹಾಕಲಾಗಿತ್ತು. ಇದರಿಂದ ಕೆಜಿಎಫ್ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದ್ದರು. ಅದಾದ ನಂತರ ಸರ್ಕಾರಗಳು ಇಲ್ಲಿ ಜನರ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ಆದರೆ ಎರಡು ದಶಕಗಳ ನಂತರ ಈಗ ಸರ್ಕಾರ ಕೆಜಿಎಫ್ ಭಾಗದಲ್ಲಿ ಒಂದು ಭರವಸೆಯ ಯೋಜನೆಯೊಂದನ್ನು ಆರಂಭಿಸಿದೆ.
ಕೆಜಿಎಫ್ನಲ್ಲಿ ಉಪಯೋಗಿಸದೆ ಬೆಮೆಲ್ ಕಂಪನಿಯ ವಶದಲ್ಲಿದ್ದ ಸುಮಾರು 973 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಮರಳಿ ತಮ್ಮ ವಶಕ್ಕೆ ಪಡೆದುಕೊಂಡಿತ್ತು. ಈಗ ಅದೇ 973 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಎಕರೆ 5 ಲಕ್ಷ ರೂ ಕಂದಾಯ ಇಲಾಖೆಗೆ ಪಾವತಿ ಮಾಡಿ ಭೂಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ. ಸದ್ಯ ಈ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ದಿ ಮಾಡುವ ಕೆಲಸವೂ ಆರಂಭವಾಗಿದೆ.
ಇದರ ಜೊತೆ ಜೊತೆಗೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಹೊಸದಾಗಿ ಚೆನೈ-ಬೆಂಗಳುರು ಎಕ್ಸ್ಪ್ರೆಕ್ಸ್ ಹೈವೇ ಕಾರಿಡಾರ್ ನಿರ್ಮಾಣ ಕೂಡ ಪೂರ್ಣವಾಗಿದೆ. ಹಾಗಾಗಿ ನೂತನ ಕೆಜಿಎಫ್ ಕೈಗಾರಿಕಾ ಪ್ರದೇಶದಲ್ಲಿ ಐಟಿ ಕಂಪನಿಗಳು ತನ್ನ ಕಂಪನಿಯನ್ನು ಆರಂಭ ಮಾಡಲು ಮನಸ್ಸು ಮಾಡುತ್ತಿದ್ದು ಈಗಾಗಲೇ ಹಲವು ವಿಶ್ವದ ಪ್ರತಿಷ್ಠಿತ ಐಟಿ ಕಂಪನಿಗಳು ಕೆಜಿಎಫ್ನಲ್ಲಿ ತಮ್ಮ ಕಂಪನಿ ಆರಂಭಿಸಲು ಆಸಕ್ತಿ ಹೊಂದಿವೆ ಅನ್ನೋ ಮಾಹಿತಿ ಸಿಕ್ಕಿದೆ.
ಇನ್ನು ಕೆಜಿಎಫ್ ಸದ್ಯದ ಮಾಹಿತಿ ಹಾಗೂ ಲೆಕ್ಕಾಚಾರದ ಪ್ರಕಾರ ಐಟಿ ಕಂಪನಿಗಳು ಹಾಗೂ ಮಲ್ಟಿ ನ್ಯಾಷನಲ್ ಕಂಪನಿಗಳು ಕೆಜಿಎಫ್ನಲ್ಲಿ ಹೂಡಿಕೆ ಮಾಡಲು ಆಸಕ್ತಿ ವಹಿಸಿವೆ. ಫಾಕ್ಸ್ ಕಾನ್, ಸೇರಿದಂತೆ ಐಟಿ ಇಂಡಸ್ಟ್ರಿಯಲ್ ಹೆಡ್ನ ಅಧಿಕಾರಿಗಳು ಕೂಡಾ ಕೆಜಿಎಫ್ಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಇದು ಐಟಿ ಕಂಪನಿಗಳನ್ನು ಸ್ಥಾಪನೆ ಮಾಡಲು ಸೂಕ್ತ. ಬೆಂಗಳೂರಿನ ಟ್ರಾಫಿಕ್ನ ಕಿರಿಕಿರಿಯಲ್ಲಿ ಸಿಲುಕುವ ಬದಲು ಯಾವುದೇ ಟ್ರಾಫಿಕ್ ಇಲ್ಲದೆ ರಾಜಧಾನಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗಲು ಸೂಕ್ತ ಪ್ರದೇಶ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೇವಲ ಒಂದು ಗಂಟೆ ಸಮಯದಲ್ಲಿ ತಲುಪಬಹುದು, ಜೊತೆಗೆ ಚೆನೈ ಬಂದರಿಗೆ ತಲುಪಲು ಕೇವಲ ಎರಡು ಗಂಟೆ ಸಮಯ ಸಾಕು.
ಅದಲ್ಲದಕ್ಕೂ ಅತಿ ಮುಖ್ಯವಾಗಿ ಹೊಸದಾಗಿ ನಿರ್ಮಾಣವಾಗಿರುವ ಬೆಂಗಳುರು-ಚೆನೈ ಎಕ್ಸಪ್ರೆಕ್ಸ್ ಕಾರಿಡಾರ್ ಹೈವೇ ಕೂಡ ಕೆಜಿಎಫ್ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಿರುವ ಕಾರಣ ಇದು ಕೈಗಾರಿಕಾ ವಲಯ ನಿರ್ಮಾಣಕ್ಕೆ ಸೂಕ್ತ ಎಂದ ನಿರ್ಧಾರಕ್ಕೆ ಬಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಕೆಜಿಎಫ್ ಚಿನ್ನದ ನಾಡು ಐಟಿ ಕಂಪನಿಗಳ ಹಬ್ ಆಗಿ ಮಾರ್ಪಾಟಾಗಲಿದೆ.