ಬೆಂಗಳೂರು:- ರಾಜ್ಯ ಸರ್ಕಾರ ತಮ್ಮ ರಕ್ಷಣೆಗೆ ಸಿಬಿಐ ಅನುಮತಿ ನಿರಾಕರಣೆ ಮಾಡ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
CIBIL Score Tips: ನಿಮ್ಮ CIBIL Score ಕಡಿಮೆ ಇದ್ಯಾ..? ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ
ಈ ಸಂಬಂಧ ಮಾತನಾಡಿದ ಅವರು,ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಿಬಿಐ ತನಿಖೆಗೆ ಕೊಟ್ಟಿದ್ದ ಅನುಮತಿಯನ್ನ ಸರ್ಕಾರ ವಾಪಸ್ ಪಡೆದಿದೆ ಎಂದರು.
ಕೇಂದ್ರ ಸರ್ಕಾರದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಿಬಿಐ ಯಾರ ಅನುಮತಿ ಪಡೆಯಬೇಕಿಲ್ಲ. ಈಗ ರಾಜ್ಯದಲ್ಲಿ ತನಿಖೆ ಮಾಡಬೇಕಾದ್ರೆ ಅನುಮತಿ ಬೇಕು ಅಂತಾರೆ. ಏನ್ ಗೋಲ್ಮಾಲ್ ಮಾಡಿದ್ದೀರಾ ಹೇಳಿ? ಯಾಕೆ ಸಿಬಿಐಗೆ ತಡೆ ಹಾಕ್ತಿದ್ದೀರಾ? ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿಚಾರ ಇವರ ಕುತ್ತಿಗೆಗೆ ಬರುತ್ತೆ. ಹೀಗಾಗಿ ಇದನ್ನ ಮಾಡಿದ್ದಾರೆ. ಇವರ ರಕ್ಷಣೆಗೆ ಸಿಬಿಐ ಅನುಮತಿ ನಿರಾಕರಣೆ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯಪಾಲರ ಪ್ರಶ್ನೆಗೆ ಕ್ಯಾಬಿನೆಟ್ ಮೂಕಲವೇ ಉತ್ತರ ಕೊಡಬೇಕು ಎಂಬ ನಿರ್ಣಯದ ವಿರುದ್ಧ ಪ್ರತಿಕ್ರಿಯಿಸಿ, ರಾಜ್ಯಪಾಲರು ಕೇಳುವ ಪ್ರಶ್ನೆಗೆ ಉತ್ತರ ಕೊಡದೆ ಕಾಂಗ್ರೆಸ್ನವರು ಭಂಡವಾದ ಮಾಡ್ತಿದ್ದಾರೆ. ಇಲ್ಲ ಸಲ್ಲದ ಅಪಾದನೆ ರಾಜ್ಯಪಾಲರ ಮೇಲೆ ಮಾಡುತ್ತಿದ್ದೀರಿ. ಕಾಂಗ್ರೆಸ್ ಸರ್ಕಾರ, ಸರ್ಕಾರದ ವ್ಯವಸ್ಥೆಯನ್ನು ಕಾಂಗ್ರೆಸ್ ಮಯ ಮಾಡಿದ್ದಾರೆ. ಕಾಂಗ್ರೆಸ್ ಕೈಗೊಂಬೆಯಾಗಿ ಅಧಿಕಾರಿಗಳನ್ನು ಮಾಡಿಕೊಂಡಿದ್ದಾರೆ. ಸಿಎಸ್ ಅವರೇ ಉತ್ತರ ಕೊಡದಂತೆ ಮಾಡಿದ್ದಾರೆ. ನಿಮಗೆ ಇಷ್ಟು ಭಯ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನದ ಸ್ಥಾನ ಹೊಂದಿರೋ ರಾಜ್ಯಪಾಲರಿಗೆ ಉತ್ತರ ಕೊಡೊಕೆ ಇವರಿಗೆ ಆಗೋದಿಲ್ಲ. ಇದೇನಾ ಕಾಂಗ್ರೆಸ್ ಪ್ರಜಾಪ್ರಭುತ್ವ? ರಾಜ್ಯಪಾಲರಿಗೆ ಮಾಹಿತಿ ಕೊಡುವುದಿಲ್ಲ ಎಂದರೆ ಇದು ಪ್ರಜಾಪ್ರಭುತ್ವನಾ?ಡಿಜಿನಾ, ಸಿಎಸ್, ಕಮೀಷನರ್ನ್ನು ರಾಜ್ಯಪಾಲರು ನೇಮಕ ಮಾಡೋದಿಲ್ಲ. ಯಾಕೆ ಇಷ್ಟು ಭಯ? ಯಾಕೆ ಅಡೆತಡೆ ಮಾಡಿದ್ದೀರಾ? ಸಿದ್ದರಾಮಯ್ಯ ಹಿರಿತನಕ್ಕೆ ಅವರೇ ಮಸಿ ಬಳಸಿಕೊಂಡಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.