ಬೆಂಗಳೂರು:– ವಿದ್ಯುತ್ ಅಪಘಾತ ತಡೆಯುವ ಕ್ರಮಗಳ ಕುರಿತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ನ. 19 ರಂದು ಕಾಡುಗೋಡಿ 66/11 ಕೆವಿ ಉಪಕೇಂದ್ರದ F9 Feederನ ವಿದ್ಯುತ್ ವಾಹಕ ತುಂಡಾಗಿ ಬಿದ್ದ ಕಾರಣ ಅದನ್ನು ತುಳಿದು ಪಾದಚಾರಿ ಮಹಿಳೆ ಮತ್ತು ಮಗು ವಿದ್ಯುತ್ ಅಪಘಾತಕ್ಕೊಳಗಾಗಿ ಮೃತಪಟ್ಟಿರುವ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ಈ ಘಟನೆಯು ಅತ್ಯಂತ ದುರದೃಷ್ಟಕರವಾಗಿದ್ದು, ಇಂತಹ ಅಪಘಾತಗಳಲ್ಲಿ ಜೀವಹಾನಿ ಆಗುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಸುರಕ್ಷತಾ ಕ್ರಮಗಳ ನಿರ್ಲಕ್ಷತೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇಂತಹ ಘಟನೆಗಳು ಆಗದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ವಿದ್ಯುತ್ ಪ್ರಸರಣ ನಿಗಮಗಳು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೆಳಕಂಡ ನಿರ್ದೇಶನಗಳನ್ನು ಸರ್ಕಾರ ನೀಡಿದೆ
1. ವಿದ್ಯುತ್ ಅಪಘಾತಗಳನ್ನು ತಡೆಯುವ ಬಗ್ಗೆ ಕಂಪನಿಗಳ ಎಲ್ಲಾ ಹಂತದ ಅಧಿಕಾರಿಗಳು ಮತ್ತು ನೌಕರರು/ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ Substation Staffಗೆ ತಿಳುವಳಿಕೆಯ ತರಬೇತಿಯನ್ನು ಕಡ್ಡಾಯವಾಗಿ ನೀಡುವುದು.
2. ವಿದ್ಯುತ್ ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನಡೆಸುವುದು ಹಾಗೂ ಟೆಲಿವಿಷನ್, ರೇಡಿಯೋ, ಸೋಷಿಯಲ್ ಮೀಡಿಯ, ವಾರ್ತಾಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು.
3) ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಅಧಿಕಾರಿಗಳು Safety Regulations ಪ್ರಕಾರ ಕಾಲಕಾಲಕ್ಕೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ನಡೆಸಿ, ನ್ಯೂನತೆಗಳನ್ನು Hazardous Locations/Safe clearances & voi w ಮಾಹಿತಿಯನ್ನು ವಿಸಕಂ/ಕವಿಪ್ರನಿನಿಗೆ ಸಲ್ಲಿಸಿ, ಪ್ರತಿಯನ್ನು ಇಂಧನ ಇಲಾಖೆಗೆ ಸಲ್ಲಿಸುವುದು.
8) ಪ್ರತಿ ವಿಸಕಂಗಳ ಮಟ್ಟದಲ್ಲಿ ಕವಿಪ್ರನಿನಿ ಅಧಿಕಾರಿಗಳನ್ನು ಒಳಗೊಂಡಂತೆ ತಿಂಗಳಿಗೊಮ್ಮೆ Safety Day ಕಾರ್ಯಕ್ರಮವನ್ನು ಹಮ್ಮಿಕೊಂಡು Best Practices ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ಅಳವಡಿಸಿಕೊಳ್ಳುವುದು. ನಿಗಮ ಮಟ್ಟದಲ್ಲಿ ಈ ಪ್ರಕ್ರಿಯೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ನಡೆಸುವುದು
6) ವಿದ್ಯುತ್ ಪರಿವೀಕ್ಷಕರು, RT/R&D/TAQC/Hot Lines ಕವಿಪ್ರನಿನಿ ಮತ್ತು ವಿಸಕಂಗಳ Quality Standards & Safety Section/HT/LT Rating 9, Inspection by Higher Officers ರವರು ನೀಡಿರುವ Observations ಗಳಿಗೆ ಅನುಸರಣಾ ಕ್ರಮ ವಹಿಸುವುದನ್ನು ನಿಗಮ ಕಛೇರಿಯಲ್ಲಿ ಪರಿಶೀಲಿಸುವುದು.