ಬೆಂಗಳೂರು:- ಕರ್ನಾಟಕ ಸರ್ಕಾರವು, ತನ್ನ ನೌಕರರಿಗೆ ಗುಡ್ ನ್ಯೂಸ್ ಕೊಟ್ಟು, ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ.
ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ಯಾಂಕರ್ʼಗೆ ಟಾಟಾ ಏಸ್ ವಾಹನ ಡಿಕ್ಕಿ! ಚಾಲಕನಿಗೆ ಗಂಭೀರ ಗಾಯ
ಕರ್ನಾಟಕ ಸಾರಿಗೆಯ ನಾಲ್ಕೂ ನಿಗಮದ ನೌಕರರ ಬರೋಬ್ಬರಿ 2792 ಕೋಟಿ ರೂಪಾಯಿ ಪಿಎಫ್ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ, ನಿಗಮದ ಖರ್ಚಿಗಾಗಿ ಬಳಕೆ ಮಾಡಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ನಾಲ್ಕು ನಿಗಮಗಳ ನೌಕರರ ಪಿಎಫ್ ಹಣ ದುರ್ಬಳಕೆಯಾಗಿರುವ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ನಾಲ್ಕು ಸಾರಿಗೆ ನಿಗಮಗಳು 2972 ಕೋಟಿ ರೂ. ನೌಕರರ ಹಣವನ್ನು ಪಿಎಫ್ ಟ್ರಸ್ಟ್ಗೆ ಜಮೆ ಮಾಡದ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು.
ಸಾರಿಗೆ ಸಿಬ್ಬಂದಿಗಳ ಪಿಎಫ್ ಟ್ರಸ್ಟ್ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಸದ್ಯಕ್ಕೆ ನಾಲ್ಕು ನಿಗಮಗಳು ಬ್ಯಾಂಕ್ನಿಂದ ಸಾಲ ಪಡೆದು, ಪಿಎಫ್ ಟ್ರಸ್ಟ್ಗೆ ಹಣ ನೀಡಲಿವೆ. ಬಳಿಕ, ಫೆಬ್ರವರಿಯಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಪಡೆದು, ಅಸಲು ಮತ್ತು ಬಡ್ಡಿ ಸಮೇತ ತೀರಿಸಲಿವೆ.
ಮುಂದಿನ ಒಂದು ವಾರದಲ್ಲಿ ಯಾವುದಾದರೂ ಬ್ಯಾಂಕ್ಗಳಿಂದ ಸಾರಿಗೆ ಇಲಾಖೆ 2 ಸಾವಿರ ಕೋಟಿ ರೂ. ಸಾಲ ಪಡೆಯಲಿದೆ. ಇದಕ್ಕೆ ರಾಜ್ಯ ಸರ್ಕಾರ ಶೂರಿಟಿಯಾಗಲಿದೆ.
ಎರಡು ಸಾವಿರ ಕೋಟಿ ರೂ.ನಲ್ಲಿ ಯಾವ್ಯಾವ ನಿಗಮಕ್ಕೆ ಎಷ್ಟು ಹಣ?
ಕೆಎಸ್ಆರ್ಟಿಸಿಗೆ – 623.80 ಕೋಟಿ ರೂ.
ಬಿಎಂಟಿಸಿಗೆ – 589.20 ಕೋಟಿ ರೂ.
ಎನ್ಡಬ್ಲೂಕೆಆರ್ಟಿಸಿಗೆ – 646.00 ಕೋಟಿ ರೂ.
ಕೆಕೆಆರ್ಟಿಸಿಗೆ – 141 ಕೋಟಿ ರೂಪಾಯಿ ಹಣ ಬರಲಿದೆ.