ಬಾಗಲಕೋಟೆ:- ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಅಕ್ರಮ ಚಟುವಟಿಕೆ ನಡೆಯದಿರಲು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆದರೆ ರಾತ್ರಿ ಡ್ಯುಟಿಯಲ್ಲಿ ಕೆಲಸ ಮರೆತು ಸಿಬ್ಬಂದಿ ನಿದ್ರೆ ಮಾಡಿದ್ದಾರೆ.
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಎಚ್ ಡಿ ದೇವೇಗೌಡರು ಮತಯಾಚನೆ!
ಚೆಕ್ ಪೋಸ್ಟ್ ನಲ್ಲೇ ಚುನಾವಣಾ ಸಿಬ್ಬಂದಿಯ ಗಾಢ ನಿದ್ರೆಗೆ ಜಾರಿರುವದು ಕಂಡು ಬಂದಿದೆ. ಸಿಬ್ಬಂದಿ ನಿದ್ರೆ ಮಾಡಿದ ವಿಡಿಯೋ ವೈರಲ್ ಆಗಿದೆ. ತೇರದಾಳ ಚೆಕ್ ಪೋಸ್ಟ್ ನಲ್ಲಿ ಘಟನೆ ಜರುಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆಕ್ ಪೋಸ್ಟ್ ಇದಾಗಿದ್ದು, ಬಾಸ್ಕರ ಬಡಿಗೇರ ಗ್ರಾಮ ಪಂಚಾಯತ ಕಾರ್ಯದರ್ಶಿ ಕೆಸರಕೊಪ್ಪ, ವಿಠ್ಠಲ ಕಾಂಬಳೆ ಕಾರ್ಯದರ್ಶಿ ಹಳಿಂಗಳಿ ಗ್ರಾಮ ಪಂಚಾಯತ ಕರ್ತವ್ಯದ ವೇಳೆ ಸಿಬ್ಬಂದಿ, ಹಾಗೂ ಪೊಲೀಸರು ನಿದ್ರೆ ಮಾಡಿದ್ದಾರೆ.
ಕರ್ತವ್ಯದ ವೇಳೆ ಮಲಗಿದ್ದ ಸಿಬ್ಬಂದಿಯನ್ನು ಎಬ್ಬಿಸಿದ ಸಾರ್ವಜನಿಕರು ಗಾಡಿ ಚೆಕ್ ಮಾಡಿ ಬನ್ನಿ ಸರ್ ಎಂದು ಮಲಗಿದ್ದ ಸಿಬ್ಬಂದಿಯನ್ನು ಎಬ್ಬಿಸಿದ್ದಾರೆ. ಸಿಬ್ಬಂದಿ ನಿದ್ರೆ ಮಾಡುವ ವಿಡಿಯೋ ವೈರಲ್ ಆಗಿದೆ. ಕಾಟಾಚಾರಕ್ಕೆ ಚೆಕ್ ಪೋಸ್ಟ್ ನಿರ್ಮಿಸಿ ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ.
ಚೆಕ್ ಪೋಸ್ಟ್ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಹಲವಾರು ಅಕ್ರಮಗಳು ನಡೆಯುತ್ತಿದೆ.
ಪ್ರಕಾಶ ಕುಂಬಾರ
ಬಾಗಲಕೋಟೆ