ಗದಗ:- ಇತ್ತೀಚಿನ ದಿನಗಳಲ್ಲಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಜೋರಾಗಿದೆ. ಮಗ ಮಾಡಿದ ಸಾಲಕ್ಕೆ ಫೈನಾನ್ಸ್ ಸಿಬ್ಬಂದಿಗಳು ಬಡ ತಾಯಿಗೆ ಶಿಕ್ಷೆ ನೀಡಿದ್ದಾರೆ.
Health Tips: ಚಳಿಗಾಲದಲ್ಲಿ ಬೆನ್ನು ಹೆಚ್ಚು ನೋವಾಗುತ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ನನ್ನ ಬಿಟ್ಟರೆ ಸಾಲ ಮಾಡಿಯಾದರೂ ಹಣ ಕಟ್ಟುತ್ತೇನೆ ಅಂದ್ರೂ ಫೈನಾನ್ಸ್ ಸಿಬ್ಬಂದಿ ತಾಯಿಯನ್ನು ಬಿಡದೇ ಇಡೀ ದಿನ ಕೂಡಿ ಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಫೈನಾನ್ಸ್ಗೆ ನುಗ್ಗಿ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಗದಗ ನಗರದ ಬಜಾಜ್ ಫೈನಾನ್ಸ್ ಕಂಪನಿ ಕಚೇರಿಯಲ್ಲಿ ಘಟನೆ ನಡೆದಿದೆ. ಗಂಗವ್ವಳನ್ನು ಕೂಡಿ ಹಾಕಿ ಕಿರುಕುಳ ನೀಡಿದ ಸಿಬ್ಬಂದಿಗಳನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.