ಬೆಂಗಳೂರು: ಉಪ ಚುನಾವಣೆ ಸಮರದಲ್ಲಿ ತೀವ್ರ ಪೈಪೋಟಿಗೆ, ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮತ್ತು ಕಾಂಗ್ರೆಸ್ ಹಾಗೂ ಎನ್ಡಿಎ ಮಿತ್ರಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್, ಯೋಗೇಶ್ವರ್ ಪ್ರತಿಷ್ಠೆಗೆ ಗೆಲುವಾಗಿದೆ. ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್ಗೆ 1,12,642 ಮತ ದೊರೆತರೆ, ಎನ್ಡಿಎ ಅಭ್ಯರ್ಥಿ ನಿಖಿಲ್ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್ಗೆ 1649 ಮತಗಳು ದೊರೆತಿವೆ.
Food on Bed: ಹಾಸಿಗೆಯ ಮೇಲೆ ಕೂತು ಊಟ ಮಾಡ್ತಾ ಇದ್ದೀರಾ.? ಹುಷಾರ್ ಹೀಗೆ ಮಾಡ್ಲೇ ಬೇಡಿ – ನಿಮಗೆ ಕಾಡುತ್ತೆ ಬಡತನ
ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.
ಯೋಗೇಶ್ವರ್ ಗೆಲುವಿಗೆ ಕಾರಣವಾದ ಪ್ರಮುಖ 10 ಕಾರಣಗಳು
- ಚನ್ನಪಟ್ಟಣ ಅಭಿವೃದ್ಧಿಗೆ ಹಲವಾರು ಯೋಜನೆಗಳ ಸರ್ಕಾರ ಘೋಷಣೆ ಮಾಡಿದ್ದು, ಆಡಳಿತ ಪರ ಅಲೆಯಿಂದ ಗೆಲುವಿಗೆ ಪ್ರಬಲ ಬೆಂಬಲವಾಯಿತು.
- ಭಾರೀ ಅಂತರದಿಂದ ಅಂದರೆ 25 ಸಾವಿರ ಮತಗಳ ಅಂತರದಿಂದ ಸಿಪಿವೈ ಗೆಲುವು ಸಾಧಿಸಿದ್ದಾರೆ.
- ಕುಮಾರಸ್ವಾಮಿ ಈ ಹಿಂದೆ ಶಾಸಕರಾಗಿದ್ದರೂ ಕೂಡಾ ಅಭಿವೃದ್ಧಿ ಕೆಲಸ ಮಾಡದ ಕಾರಣ, ಸ್ಥಳೀಯವಾಗಿ ಯೋಗೇಶ್ವರ್ ಕೆಲಸಕ್ಕೆ ಜನರ ಬೆಂಬಲ ವ್ಯಕ್ತವಾಗಿದೆ
- ಸಿಪಿ ಯೋಗೇಶ್ವರ್ಗೆ ಪ್ರಬಲ ಒಕ್ಕಲಿಗ ಸಮಾಜದ ಬೆಂಬಲ, ಒಕ್ಕಲಿಗ ನಾಯಕರಾದ ಡಿಕೆ ಸಹೋದರರ ಸಪೋರ್ಟ್
- ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಂತಿಮಕ್ಕೆ ವಿಳಂಬ ಮಾಡಿದ್ದೂ, ಕೊನೇ ಕ್ಷಣದಲ್ಲಿ ಸಿಪಿವೈ ಪಕ್ಷಾಂತರ ಮಾಡುವಂತಾಯಿತು. ಪ್ರತಿಷ್ಠೆಯಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿ ನಿಲ್ಲುವಂತಾಯಿತು.
- ವರ್ಣದ ಕುರಿತಾದ ಜಮೀರ್ ಹೇಳಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಹೀಗಾಗಿ ಇದು ನಿಖಿಲ್ ಪರ ಫಲ ಕೊಟ್ಟಿಲ್ಲ.
- ಕುಮಾರಸ್ವಾಮಿಯವರ ಸ್ವಾರ್ಥದ ರಾಜಕಾರಣ ಎಂದು ಜನರಲ್ಲಿ ಬಿಂಬಿತವಾಯಿತು. ಸಾಮಾಜಿಕ ಕಳಕಳಿ ಇಲ್ಲದ ಕಾರಣ,ನಿಖಿಲ್ ವಿರುದ್ಧ ಕುಟುಂಬ ರಾಜಕಾರಣದ ಆರೋಪದ ಹಿನ್ನಲೆ ಯೋಗೇಶ್ವರ್ ಗೆಲುವಿಗೆ ಇದು ಸಹಕಾರಿಯಾಯಿತು.
- ಪಕ್ಷಕ್ಕೆ ದುಡಿಸಿಕೊಂಡು ಅಮ್ಯಾಯವಾಗಿ ಪಕ್ಷಾಂತರ ಮಾಡಬೇಕಾಯಿತು ಎಂಬ ಅನುಕಂಪ ಯೋಗೇಶ್ವರ್ ಪರವಾಗಿ ನಿಂತಿತು.
- ಸಿಪಿ ಯೋಗೇಶ್ವರ್ ಪರ ಡಿಕೆ ಸುರೇಶ್- ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಅಬ್ಬರದ ಪ್ರಚಾರ
- ಈಗಾಗಲೇ ಎರಡು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿಯವರನ್ನು ಕ್ಷೇತ್ರದ ಜನ ಮತ್ತೆ ಸೋಲಿಸಿದ್ದಾರೆ. ನಿಖಿಲ್ ರನ್ನು ಗೆಲ್ಲಿಸುವಲ್ಲಿ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ-ದೇವೇಗೌಡರ ವೈಪಲ್ಯ ಎಂದೇ ಹೇಳಬಹುದು