ಬೀದರ್ :ಕಾಂಗ್ರೆಸ್ನ ಗ್ಯಾರಂಟಿಗಳಿಂದಾಗಿ ಸರ್ಕಾರ ದಿವಾಳಿ ಆಗ್ತಿದೆ ಎಂಬ ಬಿಜೆಪಿಗರ ಆರೋಪ ವಿಚಾರಕ್ಕೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾರೆಡ್ಡಿ ತಿರುಗೇಟು ನೀಡಿದ್ದಾರೆ. ಬೀದರ್ನಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಜನಪರ ಕೆಲಸಗಳನ್ನ ಮಾಡಬೇಕಿತ್ತು. ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಲೂಟಿ ಹೊಡೆದು ಹೋದರು. ಅದಕ್ಕೆ ಜನ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಎಲ್ಲ ಜಾತಿ, ಧರ್ಮದವರಿಗೂ ಒಳಿತಾಗುತ್ತಿದೆ.
ದೇಶದಲ್ಲಿ ಬಡತನ ಹೆಚ್ಚಾಗಿದೆ, ನಿರುದ್ಯೋಗ ತಾಂಡವ ಆಡುತ್ತಿದೆ. 11 ವರ್ಷಗಳಲ್ಲಿ 22 ಕೋಟಿ ಉದ್ಯೋಗ ಸೃಷ್ಠಿ ಆಗಬೇಕಿತ್ತು. ಬಿಜೆಪಿಗೆ ನಮ್ಮ ಒಳ್ಳೆಯ ಕೆಲಸದಿಂದ ಅಸೂಯೆ, ಹೊಟ್ಟೆ ಉರಿ ಆಗ್ತಿದೆ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಅಂತಾ ಅಪ್ರಚಾರ ಮಾಡ್ತಿದ್ದಾರೆ. ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನ ಕಾಪಿ ಹೊಡೆದು ಅಧಿಕಾರಕ್ಕೆ ಬಂದಿದೆ. ಬಿಜೆಪಿಗರಿಗೆ ನಮ್ಮನ್ನ ಹೊಗಳೋಕೆ ಆಗಲ್ಲ, ಅದಕ್ಕೆ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.