ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಬನಶಂಕರಿ ಲೇಔಟ್ನಲ್ಲಿ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯನ್ನೇ ಪತಿ ಕೊಲೆಗೈದಿರುವ ಘಟನೆ ಜರುಗಿದೆ.
Breaking News: ಶಿಕ್ಷಕಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಹಂತಕರು!
ಬಳಿಕ ಗಂಡ ಎಸ್ಕೇಪ್ ಆಗಿದ್ದು, ಆರೋಪಿ ಗಂಡನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಗೌರಿ (26) ಮೃತ ಮಹಿಳೆ ಆಗಿದ್ದು, ನಾಗೇಶ್ ಕೊಲೆ ಆರೋಪಿ ಎನ್ನಲಾಗಿದೆ. ನಿನ್ನೆ ಸಂಜೆ 7.30 ಸುಮಾರಿಗೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಇಂದು ಬೆಳಗ್ಗೆ ಸ್ಥಳೀಯರು ನೋಡಿ 112ಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಮೃತದೇಹವನ್ನು ಆರ್.ಆರ್.ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
7 ರಿಂದ 8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿ ಮದುವೆ ಆಗಿದ್ದರು. ಆಗಾಗ ಕೌಟುಂಬಿಕ ಸಮಸ್ಯೆಯಿಂದ ಇವರು ಜಗಳ ಮಾಡಿಕೊಳ್ಳುತ್ತಿದ್ದರು. 5 ವರ್ಷಗಳಿಂದ ಬೇರೆ ಊರಲ್ಲಿ ಹೆಂಡತಿಯನ್ನು ಇಟ್ಟಿದ್ದ ನಾಗೇಶ್, 3 ದಿನಗಳ ಹಿಂದೆ ಪತ್ನಿಯನ್ನು ಮನೆಗೆ ಕರೆತಂದಿದ್ದ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಸ್ಮಶಾನಕ್ಕೆ ಕರೆದೊಯ್ದು ಪತ್ನಿಯನ್ನು ಗಂಡ ನಾಗೇಶ್ ಕೊಲೆ ಮಾಡಿದ್ದಾನೆ.