ದಂಪತಿ ನಡುವೆ ಎಷ್ಟು ಪ್ರೀತಿ ಇದೆ ಎಂಬುದು ಅವರಿಬ್ಬರ ಮಾತು ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಂದ ಮಾತ್ರವಲ್ಲ, ಅವರ ಸಣ್ಣ ಪುಟ್ಟ ಕ್ರಿಯೆಯಿಂದ ಸಹ ತಿಳಿಯುತ್ತದೆ. ಇಬ್ಬರೂ ಒಟ್ಟಿಗೆ ಮಲಗುವ ವಿಧಾನವನ್ನು ಸಹ ಇದು ಒಳಗೊಂಡಿದೆ.
ಹೌದು, ಸಂಗಾತಿಯೊಂದಿಗೆ ನೀವು ಮಲಗುವ ಭಂಗಿಯು ನಿಮ್ಮ ನಡುವಿನ ಸಂಬಂಧದ ಆಳವನ್ನು ತೋರಿಸುತ್ತದೆ. ನೀವು ನಿಮ್ಮ ಸಂಗಾತಿಯನ್ನು ಹೇಗೆ ತಬ್ಬಿಕೊಳ್ಳುತ್ತೀರಿ ಅಥವಾ ಹೇಗೆ ತಬ್ಬಿಕೊಂಡಾಗ ನಿಮಗೆ ಹೆಚ್ಚು ಇಷ್ಟವಾಗುತ್ತದೆ ಎಂಬುದು ನಿಮ್ಮ ಸಂಬಂಧದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಬನ್ನಿ, ಈ ಕುತೂಹಲಕಾರಿ ಮಾಹಿತಿಯನ್ನು ನೋಡೋಣ
ಬೆನ್ನನ್ನು ಎದೆಗೆ ತಾಕಿಸಿರುವ ಭಂಗಿ
ಸ್ಪೂನಿಂಗ್ ಎಂದೂ ಕರೆಯಲಾಗುವ ಈ ಭಂಗಿಯಲ್ಲಿ ಮಹಿಳೆ ತನ್ನ ಬೆನ್ನನ್ನು ತನ್ನ ಸಂಗಾತಿಯ ಎದೆಗೆ ಒತ್ತುವಂತೆ ಇರಿಸಿ ತನ್ನನ್ನು ತಾನು ಮುದುಡಿರುವ ಸ್ಥಿತಿಯಲ್ಲಿರಿಸುತ್ತಾಳೆ. ಸಂಗಾತಿ ಆಕೆಯ ದೇಹವನ್ನು ತನ್ನ ದೇಹದಿಂದ ಸುತ್ತುವರೆಯುವಂತೆ ಆವರಿಸಿ ತನ್ನ ಬಾಹುಗಳಿಂದ ಇನ್ನಷ್ಟು ತನ್ನೆಡೆಗೆ ಸೆಳೆಯುತ್ತಾನೆ. ಈ ಭಂಗಿಯಲ್ಲಿ ಮಸನ್ನೂ ಒಂದು, ದೇಹವೂ ಒಂದು ಎಂಬ ಸ್ಥಿತಿ ಇರುತ್ತದೆ. ಈ ಭಂಗಿಯನ್ನು ಇಷ್ಟಪಡುವ ದಂಪತಿಗಳಲ್ಲಿ ಸಾಮಾನ್ಯವಾಗಿ ಸಮಾನವಾದ ಅಭಿರುಚಿಗಳೂ ಯಾವುದೇ ಕೆಲಸವನ್ನು ಜೊತೆಜೊತೆಯಾಗಿ ನಿರ್ವಹಿಸುವುದನ್ನು ಇಷ್ಟಪಡುವುದನ್ನು ಕಾಣಬಹುದು.
ಎದೆಯ ಮೇಲೆ ತಲೆ ಇರಿಸಿ ಮಲಗುವುದು
ಈ ಭಂಗಿಯಲ್ಲಿ ಪುರುಷ ತನ್ನ ಬೆನ್ನ ಮೇಲೆ ಮಲಗಿದ್ದು ಆತನ ಎದೆಯ ಮೇಲೆ ಸಂಗಾತಿ ತನ್ನ ಕಿವಿಯಾನಿಸುವಂತೆ ತಲೆಯನ್ನಿರಿ ಮಲಗಿ ಆತನ ಹೃದಯದ ಬಡಿತವನ್ನು ಆಲಿಸುತ್ತಾಳೆ. ಈ ಮೂಲಕ ಈ ಹೃದಯ ತನಗಾಗಿಯೇ ಮಿಡಿಯುತ್ತಿದೆ ಎಂಬ ಭಾವನೆ ಯನ್ನು ಆಕೆ ಪಡೆಯುತ್ತಾರೆ. ಈ ಭಂಗಿಯಲ್ಲಿ ಪವಡಿಸುವ ದಂಪತಿಗಳು ಪರಸ್ಪರರಿಗೆ ಸಹಕಾರ ನೀಡುವ ವ್ಯಕ್ತಿಗಳಾಗಿದ್ದು ಇಬ್ಬರೂ ಪರಸ್ಪರರ ಬಗ್ಗೆ ಬಹಳಷ್ಟು ಅರಿತವರಾಗಿದ್ದು ಮಾನಸಿಕವಾಗಿಯೂ ದೈಹಿಕವಾಗಿಯೂ ಜೀವನದ ಏರು ತಗ್ಗುಗಳಲ್ಲಿ ಸರಿಸಮಾನರಾಗಿ ಭಾಗಿಯಾಗಿ ಜೀವನವನ್ನು ಪರಿಪೂರ್ಣವಾಗಿ ಅನುಭವಿಸುತ್ತಾರೆ.
ಎದುರುಬದುರಾಗಿ ಮಲಗುವುದು
ಹಾಸಿಗೆಯಲ್ಲಿ ಮಲಗಿದ ಬಳಿಕ ದಂಪತಿಗಳು ಪರಸ್ಪರರ ಮುಖ ಕಾಣುವಂತೆ ಮತ್ತು ಕಣ್ಣುಗಳು ಪರಸ್ಪರ ಕಲೆತುಕೊಳ್ಳುವಷ್ಟು ಹತ್ತಿರ ಪವಡಿಸುತ್ತಾರೆ. ಪರಸ್ಪರ ಬಾಹುಗಳನ್ನು ಆವರಿಸಿ ಸಂಗಾತಿಯನ್ನು ತಮ್ಮತ್ತ ಸೆಳೆಯುತ್ತಾರೆ. ಈ ಭಂಗಿ ಇಷ್ಟಪಡುವ ದಂಪತಿಗಳು ಪರಸ್ಪರ ಒಬ್ಬರು ಇನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಆತ್ಮೀಯರಾಗಿದ್ದು ಊಟ ತಿಂಡಿಯ ಸಹೈತ ಪ್ರತಿಯೊಂದನ್ನೂ ಸಮಾನವಾಗಿ ಹಂಚಿಕೊಳ್ಳುವವರಾಗಿರುತ್ತಾರೆ.
ಒಬ್ಬರ ಮೇಲೆ ಭಾರಹಾಕಿ ಮಲಗುವ ಭಂಗಿ
ಒಂದು ವೇಳೆ ಸಂಗಾತಿಯ ದೇಹದ ಅಂಶಿಕ ಅಥವಾ ಬಹುತೇಕ ಭಾರ ಇನ್ನೊಬ್ಬರ ಮೇಲೆ ಹೇರುವ ಭಂಗಿಯಲ್ಲಿ ಪವಡಿಸುವುದು ನಿಮಗೆ ಇಷ್ಟವಾಗಿದ್ದರೆ ನಿಮಗೆ ಅಚ್ಚರಿಯ ಮಾಹಿತಿ ಇಲ್ಲಿದೆ. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಮೇಲೆ ತನ್ನ ದೇಹವನ್ನು ಇರಿಸುವ ಭಂಗಿಯಲ್ಲಿದ್ದರೆ ಆತ ನಿಮಗೆ ರಕ್ಷಣೆ ನೀಡುವ ವ್ಯಕ್ತಿಯಾಗಿರುತ್ತಾರೆ. ಆದರೂ ಕೆಲವೊಮ್ಮೆ ಆ ವ್ಯಕ್ತಿಯು ಸ್ವಲ್ಪ ಪ್ರಾಬಲ್ಯ ಹೊಂದಿದಂತೆ ಕಾಣಿಸಬಹುದು, ಆದರೆ ಅಂತಹ ಸಂಬಂಧಗಳು ಯಾವಾಗಲೂ ಸಮಯದ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತವೆ. ಏಕೆಂದರೆ ಒಬ್ಬ ಪಾಲುದಾರನು ಇನ್ನೊಬ್ಬರ ಕಡೆಗೆ ರಕ್ಷಣಾತ್ಮಕನಾಗಿರದಿದ್ದರೂ ಸಂಬಂಧವನ್ನು ಯಾವುದೇ ಹಾನಿಯಿಂದ ರಕ್ಷಿಸಲು ಅವನು ತನಗೆ ಸಾಧ್ಯವಾದ ಎಲ್ಲವನ್ನೂ ಮಾಡುತ್ತಾನೆ.
ಸಂಗಾತಿಯ ಮೇಲೆ ತನ್ನ ಇಡಿಯ ಮೈಭಾರವನ್ನು ಹೇರುವುದು
ಅಪ್ಪುಗೆ ಯಾವುದೇ ಬಗೆಯಲ್ಲಿದ್ದರೂ ಇದು ಸಂಗಾತಿಗಳ ನಡುವಣ ಅಂತವನ್ನು ಹೆಚ್ಚೂಕಡಿಮೆ ಇಲ್ಲವಾಗಿಸುತ್ತದೆ. ಈ ಭಂಗಿಯಲ್ಲಿ ಸಂಗಾತಿಗಳ ನಡುವಣೆ ಯಾವುದೇ ವೈಮನಸ್ಯ ಅಥವಾ ದುಮ್ಮಾನ ಇಲ್ಲವಾಗುತ್ತದೆ. ಹಾಗಾಗಿ, ಮುಂದಿನ ಬಾರಿ, ನಿಮ್ಮ ಸಂಗಾತಿ ಹೊರಗಿನ ಯಾವುದೋ ತೊಂದರೆಯಿಂದ ಖಿನ್ನಮನಸ್ಕನಾಗಿ ಬಂದಿದ್ದರೆ ಅಥವಾ ಅವರ ಮನೆಯವರೊಂದಿಗೆ ಜಗಳವೇನಾದರೂ ಆಡಿ ಬಂದಿದ್ದರೆ, ಈ ಭಂಗಿಯ ಅಪ್ಪುಗೆಯಿಂದ ಆತ ತನ್ನೆಲ್ಲಾ ನೋವುಗಳನ್ನು ಮರೆಯಬಲ್ಲ!