ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. 15 ಮಂದಿಯಿಂದ ಯುವಕನ ಮೇಲೆ ಹಲ್ಲೆ ನಡೆದಿದೆ.
ಮೆಟ್ರೋ ಧ್ವನಿ ಬದಲಾಗುತ್ತಾ!?: ಅಪರ್ಣಾ ಮರೆ ಆಗ್ತಿದ್ದಂತೆ ಹೊಸ ಧ್ವನಿಗೆ BMCL ಹುಡುಕಾಟ!
15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಹಲ್ಲೆಯಿಂದ ಯುವಕನ ಮುಖ ಮತ್ತು ಮೂಗಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.