ರಷ್ಯಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ವಿಜಯ ಸಾಧಿಸಲಿ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಮೊದಲ ಬಾರಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಮತ್ತೊಮ್ಮೆ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವಂತೆ ಹಾರೈಸಿದ್ದಾರೆ. ನಮ್ಮ ಸ್ನೇಹಿತರ ಪ್ರತಿ ಯಶಸ್ಸನ್ನು ಹಾರೈಸುತ್ತೇನೆ. ಎರಡು ದೇಶಗಳು ಸಾಂಪ್ರದಾಯಿಕ ಸೌಹಾರ್ದ ಸಂಬಂಧಗಳನ್ನು ಹೊಂದಿದೆ ಎಂದು ಹೇಳಿದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ದೆಹಲಿ ಮತ್ತು ಮಾಸ್ಕೋ ನಡುವೆ ರಾಜಕೀಯ ಶಕ್ತಿಗಳ ಹೊಂದಾಣಿಕೆ ಏನೇ ಇರಲಿ. ಅದಕ್ಕೂ ಮೇಲಾಗಿ ನನ್ನ ಮತ್ತು ಮೋದಿ ಅವರು ಸ್ನೇಹ ಇದೆ ಎಂದು ಹೇಳಿದರು. ಇದರ ಜತೆಗೆ ಪ್ರಧಾನಿ ಮೋದಿ ಅವರೊಂದಿಗೆ ಉಕ್ರೇನ್ ಬೆಳವಣಿಗೆ ಬಗ್ಗೆ ಮಾತನಾಡಿದ್ದಾನೆ. ಹಲವು ಬಾರಿ ಅಲ್ಲಿ ನಡೆಯುವ ವಿಚಾರಗಳ ಬಗ್ಗೆ ನಾವು ವೈಯಕ್ತಿಕವಾಗಿ ಮಾತನಾಡಿದ್ದೇನೆ. ಈ ಬಗ್ಗೆ ಅವರು ಕೂಡ ಸಲಹೆಗಳನ್ನು ಕೂಡ ನೀಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಭಾರತ ಮತ್ತು ರಷ್ಯಾ ಒಟ್ಟಾಗಿ ಚರ್ಚೆ ನಡೆಸಲಿದೆ. ಹಾಗೂ ಅವರು ಕೂಡ ಶಾಂತಿಯುತವಾಗಿ ಇದನ್ನು ಪರಿಹಾರಿಸುವ ಎಂದು ಹೇಳಿದ್ದಾರೆ.