ಬೆಂಗಳೂರು:- ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸತ್ತು ಹೋಗಿದ್ದಾನೆಂದು ಬಿಂಬಿಸಿಕೊಂಡು ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ.
ಕಾಡುಬಿಸನಹಳ್ಳಿ ಸೋಮನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನ.ಬಳಿಕ ರಾಜಾನುಕುಂಟೆಯಲ್ಲಿ ಒಂದು ಕೊಲೆ ಕೇಸ್ ನಲ್ಲಿ ಅರೋಪಿಯಾಗಿದ್ದ. ಪೊಲೀಸರಿಗೆ ಸಿಗದೆ ಎರಡು ವರ್ಷಗಳಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ ಖತರ್ನಾಕ ಆಸಾಮಿ. ಪೊಲೀಸರು ಮನೆಯವರನ್ನು ವಿಚಾರಿಸಿದಾಗ ಮಗ ಸತ್ತು ಹೋಗಿದ್ದಾನೆ ಎಂದು ನಂಬಿಸಿದ್ದ ಕುಟುಂಬದವರು. ಆದರೆ ಸಿಸಿಬಿಗೆ ಅವನು ಸತ್ತಿರುವ ವಿಚಾರದ ಬಗ್ಗೆ ಡೌಟು ಬಂದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಸತ್ತಿದ್ದಾನೆಂದು ಹೇಳಲಾದ ಆರೋಪಿ ಮಲ್ಲಿಕಾರ್ಜುನ ಪತ್ತೆಗೆ ವಿಚಾರಣೆಗೆ ಮುಂದಾಗಿತ್ತು.
ಗೆಳೆಯರು, ಕುಟುಂಬಸ್ಥರು ಯಾರನ್ನೇ ಕೇಳಿದರೂ ಸತ್ತಿದ್ದಾನೆಂದು ಮಾಹಿತಿ ನೀಡುತ್ತಿದ್ದರು. ಸಿಸಿಬಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಆರೋಪಿ ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕತೊಡಗಿತು. ಕೊನೆಗೆ ಆರೋಪಿ ಮಲ್ಲಿ ಸತ್ತಿಲ್ಲ. ಅರೆಸ್ಟ್ನಿಂದ ಬಚಾವ್ ಆಗಲು ಸತ್ತಿದ್ದಾನೆ ಬಿಂಬಿಸಿ ತಲೆಮರೆಸಿಕೊಂಡು ಊರೂರು ಓಡಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಕೊನೆಗೂ ಬಂಧಿಸಿದ್ದಾರೆ