2024 ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ಭರವಸೆ, ಹೊಸ ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು ಇಡೀ ವಿಶ್ವ ಸ್ವಾಗತಿಸಿದೆ. ಮನುಕುಲಕ್ಕೆ ದೊಡ್ಡ ಪಾಠ ಹೇಳಿಕೊಟ್ಟ 2023ಗೆ ಧನ್ಯವಾದ ಹೇಳಿ, ಮತ್ತೆ ಅಂತ ವರ್ಷ ಮರುಕಳುಹಿಸದಿರಲಿ ಎಂದು ಪ್ರಾರ್ಥಿಸುತ್ತಾ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ಇಂದು ಎಲ್ಲೆಲ್ಲೂ ಹೊಸ ವರ್ಷದ ಶುಭಾಶಯಗಳೇ ಹರಿದಾಡುತ್ತಿದೆ. ಎಲ್ಲರೂ ಹೊಸ ವರ್ಷಕ್ಕೆ ಶುಭಾಶಯಗಳನ್ನು ತಿಳಿಸುತ್ತಾ ಆನಂದಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಟರು ಸಹ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಪ್ರೀತಿಯ ಶುಭಾಶಯ ಕೋರುತ್ತಿದ್ದಾರೆ.
ಅಂದ ಹಾಗೆ ಸ್ಯಾಂಡಲ್ವುಡ್ ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ಹೊಸ ವರ್ಷಕ್ಕೆ ವಿಭಿನ್ನವಾಗಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.
ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾ ಖಾತೆಯಲ್ಲಿ, ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನ ಸಾಕಾರಗೊಳಿಸಬಲ್ಲದು… ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.