ಬೆಂಗಳೂರು: ರಾಜ್ಯಾಧ್ಯಕ್ಷರು ಕೊಟ್ಟ ಜವಾಬ್ದಾರಿ ನಿರ್ವಹಣೆಯನ್ನ ಯಶಸ್ವಿಯಾಗಿ ಮಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,
ಸದ್ಯ ಅಡಾಕ್ ರಾಜ್ಯಾಧ್ಯಕ್ಷರನ್ನ ನೇಮಿಸಲಾಗಿದೆ. ಈಗ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿದೆ. ರಾಜ್ಯಾಧ್ಯಕ್ಷರು ಕೊಟ್ಟ ಜವಾಬ್ದಾರಿ ನಿರ್ವಹಣೆಯನ್ನ ಯಶಸ್ವಿಯಾಗಿ ಮಾಡಲಿಲ್ಲ. ಅತೃಪ್ತರನ್ನ ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲು-ಚರ್ಮದ ಆರೋಗ್ಯಕ್ಕೂ ಬೇಕು!
ಇನ್ನು ನೂತನ ರಾಜ್ಯಾಧ್ಯಕ್ಷರ ನೇಮದ ಕುರಿತು ಮಾತನಾಡಿದ ಅವರು, ‘ಸಹಮತ ಇರದಿದ್ದರೆ ಪಕ್ಷದಲ್ಲಿ ಚುನಾವಣೆ ನಡೆಯುತ್ತೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಬೇಡ ಅಂದರೆ ಅವಿರೋಧ ಆಯ್ಕೆ ಆಗುತ್ತೆ’ ಎನ್ನುವ ಮೂಲಕ ಅತೃಪ್ತರ ಮನವೊಲಿಕೆ ಆಗದಿದ್ದರೆ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.