ವಿಶ್ವಕಪ್ ಗೆಲ್ಲಲು ನಾನು ಅಂದು ತೆಗೆದುಕೊಂಡ ನಿರ್ಧಾರ ಕಾರಣ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
17 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಈ ಗೆಲುವಿಗೆ ಕಾರಣರಾದ ಹಲವರಿಗೆ ಶ್ರೇಯಸ್ಸು ನೀಡಲಾಗಿದೆ. ಆದರೆ ಎಲ್ಲೂ ಕೂಡ ಸೌರವ್ ಗಂಗೂಲಿ ಅವರ ಹೆಸರು ಕೇಳಿ ಬಂದಿಲ್ಲ ಎಂಬುದು ವಿಶೇಷ.
Romance: ತುಂತುರು ಮಳೆಯ ನಡುವೆ ಪ್ರೇಮಿಗಳ ರೊಮ್ಯಾನ್ಸ್! VIDEO VIRAL!
ಇದೀಗ ಈ ಬಗ್ಗೆ ಖುದ್ದು ಸೌರವ್ ಗಂಗೂಲಿಯೇ ಮಾತನಾಡಿದ್ದಾರೆ. ವಿಶ್ವಕಪ್ ಗೆಲುವಿನ ಎಲ್ಲರೂ ನನ್ನನ್ನು ಮರೆತರು ಎಂದಿದ್ದಾರೆ. ಹೀಗೆ ಹೇಳಲು ಮುಖ್ಯ ಕಾರಣ, ರೋಹಿತ್ ಶರ್ಮಾ ಅವರನ್ನು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕರಾಗಿ ನೇಮಿಸಿದಾದ ಕೇಳಿಬಂದ ಟೀಕೆಗಳು. ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ನೀಡಲಾಗಿತ್ತು. ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಸೌರವ್ ಗಂಗೂಲಿ.
ಇದರ ಬೆನ್ನಲ್ಲೇ ಗಂಗೂಲಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟೀಕಾ ಪ್ರಹಾರಗಳಾಗಿತ್ತು. ಆದರೆ ಇದೀಗ ಗಂಗೂಲಿಯ ನಿರ್ಧಾರ ಸರಿಯಾಗಿತ್ತು ಎಂಬುದು ಸಾಬೀತಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಂಡಿದೆ.
ಆದರೆ ಈ ವಿಶ್ವಕಪ್ ಗೆಲುವಿನೊಂದಿಗೆ ಎಲ್ಲರೂ ನನ್ನನ್ನು ಮರೆತಿದ್ದಾರೆ ಎಂದಿದ್ದಾರೆ ಸೌರವ್ ಗಂಗೂಲಿ. ನಾನು ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನಾಯಕನಾಗಿ ಮಾಡಿದಾಗ ಎಲ್ಲರೂ ನನ್ನನ್ನು ಟೀಕಿಸಿದ್ದರು. ಇದೀಗ ಅದೇ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಆದರೀಗ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಮಾಡಿದ್ದು ನಾನು ಎಂಬುದನ್ನು ಎಲ್ಲರೂ ಮೆರತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಹೇಳಿದ್ದಾರೆ