IPL ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಅವರನ್ನು 11.50 ರೂ. ಗಳಿಗೆ ಖರೀದಿಸಿದೆ. ಆದರೆ, ಮಿಚೆಲ್ ಸ್ಟಾರ್ಕ್ ಹಾಗೂ ರಚಿನ್ ರವೀಂದ್ರ ಅವರನ್ನು ಖರೀದಿಸಲು ಆಸಕ್ತಿ ತೋರದೆ ಅಲ್ಝಾರಿ ಜೋಸೆಫ್ ಅವರನ್ನು ಖರೀದಿಸಿದ ಬೆಂಗಳೂರು ಫ್ರಾಂಚೈಸಿ ವಿರುದ್ದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ನಂತರ ಎರಡನೇ ಅವಧಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಗ್ಗ-ಜಗ್ಗಾಟ ನಡೆದಿತ್ತು. ಆದರೆ, ಅಂತಿಮವಾಗಿ ಆರ್ಸಿಬಿ ಅಂಟಿಗುವಾ ಮೂಲದ ವೇಗಿಯನ್ನು ಖರೀಸುವಲ್ಲಿ ಯಶಸ್ವಿಯಾಯಿತು.
ಸ್ಟಾರ್ ಆಟಗಾರರನ್ನು ಬಿಟ್ಟು ವೆಸ್ಟ್ ಇಂಡೀಸ್ ವೇಗಿಯನ್ನು ಖರೀದಿಸಿದ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಇದು ಅತ್ಯಂತ ಕೆಟ್ಟ ಖರೀದಿ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಆರ್ಸಿಬಿ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಬಹುದೆಂದು ನಿರೀಕ್ಷೆ ಮಾಡಿದ್ದೆವು. ಆದರೆ, ಅಲ್ಝಾರಿ ಜೋಸೆಫ್ ಅವರನ್ನು ಖರೀದಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.