ಬೆಂಗಳೂರು:- ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಮುನ್ನ ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸೂರ್ಯ ರಶ್ಮಿ ಸ್ಪರ್ಶಿಸಿವೆ.
ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕ ರವಿಸುಬ್ರಮಣ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗವಿಗಂಗದರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಶಿವನ ಪದಸ್ಪರ್ಶ ಮಾಡುವ ಪುಣ್ಯ ಸಮಯಕ್ಕೆ ಭಾಗಿಯಾಗಲು ಸಹಸ್ರಾರು ಭಕ್ತರು ಬಂದಿದ್ದಾರೆ. ಕೆಲ ಜನರಿಗೆ ಮಾತ್ರ ದೇವಸ್ಥಾನದ ಒಳಗೆ ಈ ವಿಸ್ಮಯ ಕ್ಷಣ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಆದ್ರೆ ಭಕ್ತರಿಗಾಗಿ ಎಲ್ ಇಡಿ ಸ್ಕ್ರೀನ್ ಹಾಕುವ ಮೂಲಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು 700 ವರ್ಷಗಳ ಇತಿಹಾಸ ಇರುವ ದೇವಸ್ಥಾನವಾಗಿದೆ. ಭಕ್ತರ ಅನುಕೂಲಕ್ಕಾಗಿ ಸ್ಕ್ರೀನ್ ಮೂಲಕ ಸೂರ್ಯ ರಶ್ಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು.