ಬೆಂಗಳೂರು :- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ರೇಟ್ ಗಗನಕ್ಕೇರುತ್ತಿದೆ. ಬೆಳ್ಳುಳ್ಳಿಯ ಬೆಲೆ 350-450ರ ಗಡಿ ಮುಟ್ಟಿದೆ.
ಅಕಾಲಿಕ ಮಳೆ,ಹವಮಾನ ವೈಪರೀತ್ಯ ಹಿನ್ನಲೆ ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆ ಆಗಿದೆ. ಹಾಪ್ ಕಾಮ್ಸ್ ನಲ್ಲಿ ಒಂದು ಕೆಜಿ ಬೆಳ್ಳುಳ್ಳಿಗೆ 320 ರೂಪಾಯಿ ಇದ್ದು, ಬೆಳ್ಳುಳ್ಳಿ ಬಿಡಿಸಿದ್ದು ಒಂದು ಕೆ.ಜಿಗೆ 360 ರೂಪಾಯಿ. ಇಷ್ಟು ದಿನಗಳ ಕಾಲ ನಾಸಿಕ್,ಪುನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯನ್ನ ರಫ್ತು ಕಡಿಮೆಯಾಗಿದೆ
ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಇನ್ನೂ ಎರಡು ತಿಂಗಳುಗಳ ಕಾಲ ಬೆಳ್ಳುಳ್ಳಿ ಹೊಸ ಬೆಳೆ ಬರಲ್ಲ. ಹೀಗಾಗಿ ಇನ್ನೂ ರೇಟ್ ಹೆಚ್ಚಾಗೋ ಸಾಧ್ಯತೆ ಇದೆ.