ನೆಲಮಂಗಲ:- ದಾಯಾದಿಗಳ ಕಲಹಕ್ಕೆ ಕಟಾವು ಗೆ ಬಂದಿದ್ದ ರಾಗಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಎಡೆಹಳ್ಳಿ ಗ್ರಾಮದಲ್ಲಿ ಜರುಗಿದೆ.
ರೈತ ಮಂಜುನಾಥ್ ರಾಗಿ ಹೊಲಕ್ಕೆ ಬೆಂಕಿ ಬಿದ್ದಿದ್ದು, ಎಡೆಯಳ್ಳಿ ಗ್ರಾಮದ ಸರ್ವೆ ನಂಬರ್ 97 ರಲ್ಲಿ ಘಟನೆ ಜರುಗಿದೆ. ಕಟಾವಿಗೆ ಬಂದಿದ್ದ ಸುಮಾರು 1 ಎಕರೆ 20 ಗುಂಟೆ ರಾಗಿ ಹೊಲಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.
ತಿನ್ನುವ ಅನ್ನಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳ ವಿರುದ್ಧ ರೈತ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರೈತ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ. ಸೋಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.