ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ ನಿಜ.. ಕೆಲವರಲ್ಲಿ ಮೆಹಂದಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಚಗಾಗುತ್ತದೆ ಎಂಬ ಭಯವಿದೆ.
ಓಲಾ ಚಾಲಕನಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ 2 ರೂಪಾಯಿಯ ಒಂದು ವಸ್ತು ನಿಮ್ಮ ಚಿಂತೆಗೆ ಶಾಶ್ವತ ಪರಿಹಾರ ನೀಡುತ್ತದೆ. ಮೆಹಂದಿ ಅಥವಾ ಹೆನ್ನಾ ಪುಡಿಯೊಂದಿಗೆ 2 ರೂ.ಗಳ ಕಾಫಿ ಪುಡಿ ಬೆರೆಸಿ ಹೇರ್ ಡೈ ಮಾಡಿದ್ರೆ ಬಿಳಿ ಕೂದಲು ಒಂದೇ ಬಾರಿಗೆ ಕಪ್ಪಾಗುತ್ತದೆ.
ಮೆಹಂದಿಯೊಂದಿಗೆ ಕಾಫಿಪುಡಿ ಬೆರೆಸಿ ಹಚ್ಚುವುದರಿಂದ ಕೂದಲು ಗಾಢ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಕೂದಲಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿವೆ. ಆದರೂ, ಮೆಹಂದಿ ಬಳಕೆಯಿಂದ ಅಡ್ಡಪರಿಣಾಮಗಲಿಲ್ಲದೇ ಕೂದಲು ಕಪ್ಪಾಗಿಸಬಹುದು.