ಬೆಂಗಳೂರು: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ನಾಯಿ ಮರಿಯನ್ನು ಬಿಡದ ಖದೀಮರು ಮನೆಯ ಹೊರಗೆ ಆಟವಾಡುತ್ತಿದ್ದ ನಾಯಿಮರಿಯನ್ನು ಹೊತ್ತೊಯ್ದ ಘಟನೆ ಗಿರಿನಗರದಲ್ಲಿ ನಡೆದಿದೆ.
ಸ್ಕೂಟಿಯಲ್ಲಿ ಬಂದು ನಾಯಿ ಕದ್ದಿರುವ ಖದೀಮರು 10 ತಿಂಗಳ ಡೈಸಿ ಎಂಬ ಹೆಸರಿನ ನಾಯಿಮರಿ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಮತಿ ಎಂಬುವವರು ಸಾಕಿದ್ದ ಡೈಸಿ ಹೆಸರಿನ ನಾಯಿಮರಿಯಾಗಿದ್ದು 1 ತಿಂಗಳ ಮರಿ ಇದ್ದಾಗಲೇ ತಂದು ಸಾಕಿದ್ದರು
ಸದ್ಯ ನಾಯಿ ಮರಿ ಕಳ್ಳತನ ಬಗ್ಗೆ ದೂರು ದಾಖಲಿಸಿರುವ ಸುಮತಿ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲು ಮಾಡಿದ್ದಾರೆ. ಹಾಗೆ ಯಾರಾದರೂ ನಾಯಿಮರಿಯನ್ನು ಕಂಡರೆ ದೂರು ದಾಖಲಿಸಲು ಕೂಡ ಮನವಿ ಮಾಡಿದ್ದಾರೆ.