ಬಾಗಲಕೋಟೆ: ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಜಿಲ್ಲೆಯ ಮುಧೋಳ ನಗರದ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿಯಾದ ಗುರುನಾಥ ಜೋಷಿ ಅವರು ರಾಮಮಂದಿರದ ಮಂಡಲರಾಧನೆ ಆಯ್ಕೆಯಾಗಿದ್ದಾರೆ.
ಸದ್ಯ ಮೂಧೋಳ ನಗರದಲ್ಲಿ ವಾಸವಿದ್ದಾರೆ. ಇವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಶುಕ್ಲ ಯಜುರ್ವೇದ ಅಧ್ಯಯನವನ್ನು ಮಾಡಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಜೋಷಿಯವರು ಆಯ್ಕೆಯಾಗಿದ್ದಾರೆ. ಜೋಷಿಯವರು ಪ್ರಸ್ತುತ ಮುಧೋಳ ನಗರದಲ್ಲಿ ಸದ್ಗುರು ಶ್ರೀ ಚಿದಂಬರ ವೈದಿಕ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದಾರೆ.
ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ: ಈಗಲೇ ನಿಲ್ಲಿಸಿ ಅಪಾಯ ಕಟ್ಟಿಟ್ಟಬುತ್ತಿ!
ಮೂಲತಃ ಅರ್ಚಕ ವೃತ್ತಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಈ ಹಿಂದೆ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಅಯೋಧ್ಯೆ ರಾಮಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಇದೇ ಫೆ.16 ಮತ್ತು 16 ರಂದು ನಡೆಯುವ ಎರಡು ದಿನಗಳ ಮಂಡಲಾರಾಧನೆ ಪೂಜೆಯಲ್ಲಿ ಗುರುನಾಥ ಜೋಷಿಯವರು ಭಾಗಿಯಾಗಲಿದ್ದಾರೆ.