ಬೆಂಗಳೂರು: ಹಾಲು, ಪೆಟ್ರೋಲ್, ಬಿಯರ್ ದರ ಏರಿಕೆ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ದರ ದಿಢೀರ್ ಏರಿಕೆ ಆಗಿದೆ. ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಳ ಮಾಡಿರುವುದರಿಂದ ಕಳೆದ ಒಂದು ವಾರದಿಂದೀಚೆಗೆ ಏಕಾಏಕಿ ಅಡುಗೆ ಎಣ್ಣೆ ದರ ಹೆಚ್ಚಳವಾಗಿದೆ.
ಸೂರ್ಯಕಾಂತಿ ಎಣ್ಣೆ ಒಂದು ಲೀಟರ್ಗೆ ಸಗಟು ದರದಲ್ಲಿ ತಲಾ 10-15 ರೂ.ವರೆಗೆ ಏರಿಕೆಯಾದರೆ, ತಾಳೆ ಎಣ್ಣೆ ಒಂದು ಲೀಟರ್ಗೆ ಬರೋಬ್ಬರಿ 20 ರಿಂದ 21ರೂ. ವರೆಗೆ ಏರಿಕೆ ಆಗಿದೆ. ಆಮದು ಸುಂಕ ಹೆಚ್ಚಳ ಮಾಡಿರುವುದರಿಂದ ಸೂರ್ಯಕಾಂತಿ ಎಣ್ಣೆಗೆ ಶೇಕಡಾ 20 ರಷ್ಟು ಆಮದು ಶುಲ್ಕ ಹೆಚ್ಚಿಸಿದರೆ, ತಾಳೆಎಣ್ಣೆಗೆ ಶೇಕಡಾ 37 ರಷ್ಟು ಏರಿಕೆಯಾಗಿದೆ.
ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ
- ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)
- ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)
- ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)
- ರುಚಿ ಗೋಲ್ಡ್: 96 (ಹಳೆಯ ದರ), 112 ರೂ (ಈಗಿನ ದರ)
- ಜೆಮಿನಿ ಸನ್ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)
- ಫಾರ್ಚುನ್: 111 (ಹಳೆಯ ದರ), 126 ರೂ (ಈಗಿನ ದರ)
- ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)
ಕೇಂದ್ರ ಸರ್ಕಾರದ ಈ ಕ್ರಮದಿಂದ ಏಕಾಏಕಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಅಡುಗೆ ಎಣ್ಣೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಜಿಎಸ್ಟಿ ವ್ಯಾಪಿಗೆ ಒಳಪಡಿಸಿದೆ. ಈ ಮಧ್ಯೆ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಹೀಗಾಗಿ, ಬೆಲೆ ಏರಿಕೆ ಆಗಿದೆ. ಅಡುಗೆ ಎಣ್ಣೆ ದರ ಏರಿಕೆಯು ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಆದರೆ ಹೋಟೆಲ್ ಮಾಲೀಕರು ತಿಂಡಿಗಳ ಬೆಲೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ.
Condoms Problems: ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಹರಿದ್ರೆ ತಕ್ಷಣ ಹೀಗೆ ಮಾಡಿ..!
ಅಡುಗೆ ಎಣ್ಣೆ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಸಿಡಿಮಿಡಿಗೊಂಡಿದ್ದಾರೆ. ಈ ರೀತಿಯಾದರೆ ಜನ ಸಾಮಾನ್ಯರು ಬದುಕೊದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈಗಾಗಲೆ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಬಡವರು ಬದುಕುವುದು ಕಷ್ಟ. ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.