ಹಾಸನ : ಹುಲ್ಲಿನ ಬಣವೆ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಡಕ್ಯಾತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಪ್ಯಾರಾ ಟ್ರೂಪರ್ ಟ್ರೈನಿಂಗ್ ವೇಳೆ ಯೋಧ ಮಂಜುನಾಥ್ ನಿಧನ ; ಸಂಕೂರಿನಲ್ಲಿ ನೀರವ ಮೌನ
ರೈತ ದೇವರಾಜು ಎಂಬುವವರಿಗೆ ಸೇರಿದ ಜಮೀನನಲ್ಲಿ ಬೆಳೆದಿದ್ದ ಭತ್ತದ ಹುಲ್ಲಿನ ಮೇಲೆ ವಿದ್ಯುತ್ ತಂತಿ ದಿಢೀರ್ ತುಂಡಾಗಿ ಬಿದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸುವಷ್ಟರಲ್ಲಿ ಭತ್ತದ ಹುಲ್ಲೂ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.