ಬೆಂಗಳೂರು:- ನ್ಯಾಯಾಲಯದಿಂದ ಎಸಿಬಿ ರದ್ದು ಹಿನ್ನೆಲೆ ಎಸಿಬಿಯಲ್ಲಿದ್ದ ಹುದ್ದೆಗಳು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಲೋಕಾಯಕ್ತ ಮತ್ತು ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಎಸಿಬಿಯಲ್ಲಿದ್ದ ಬರೊಬ್ಬರಿ 524 ಹುದ್ದೆಗಳನ್ನ ವಿಂಗಡಿಸಿ, ಎರಡು ಇಲಾಖೆಗೆ ವರ್ಗಾಹಿಸಲಾಗಿದೆ. 2022ರ ಆಗಸ್ಟ್.11 ರಂದು ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಎಸಿಬಿ ರದ್ದು ಹಿನ್ನೆಲೆ ಅಲ್ಲಿ ಇರುವಂತಹ ಹುದ್ದೆಗಳು ಖಾಲಿಯಾಗಿತ್ತು.
ಇದೀಗ ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆ ಹಿನ್ನೆಲೆ ಅಧಿಕಾರಿ, ಸಿಬ್ಬಂದಿಯಿಂದ ಕೇಸ್ ಕ್ಲಿಯರ್ ಮಾಡಲು ಕಷ್ಟ ಆಗುತ್ತಿದ್ದು, ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಲೋಕಾಯಕ್ತರು ಮನವಿ ಮಾಡಿದ್ದರು. ಹೀಗಾಗಿ ಎಸಿಬಿಯಲ್ಲಿದ್ದ ಹುದ್ದೆಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ. ಅದರಂತೆ ಭ್ರಷ್ಟಾಚಾರ ನಿಗ್ರಹ ದಳದಿಂದ ಲೋಕಾಯುಕ್ತಕ್ಕೆ 266 ಹುದ್ದೆಗಳು ಹಾಗೂ ಪೊಲೀಸ್ ಇಲಾಖೆಗೆ 258 ಹುದ್ದೆಗಳನ್ನು ವರ್ಗಾವಣೆ ಮಾಡಲಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿ, ಆದೇಶ ಹೊರಡಿಸಿತ್ತು. ಜೊತೆಗೆ ಲೋಕಾಯುಕ್ಕೆ ಸಂಪೂರ್ಣ ಅಧಿಕಾರ ನೀಡಿತ್ತು. ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿನ ಅಂಶಗಳನ್ನು ಪರಿಶೀಲಿಸಿದ ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿತ್ತು