ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ವಿವಾದಿತ ಸಿನಿಮಾಗಳು ಹೆಚ್ಚು ಹೆಚ್ಚು ತೆರೆಗೆ ಬರ್ತಿವೆ. ಅವು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗ್ತಿವೆ ಕೂಡ. ಅಂತಹ ಚಿತ್ರಗಳ ಸಾಲಿಗೆ ಇದೀಗ ಜೆಎನ್.ಯು ಸಿನಿಮಾ ಸೇರಿಕೊಂಡಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಭಾರೀ ಪರ ಮತ್ತು ವಿರೋಧ ಹುಟ್ಟಿಹಾಕಿದೆ.
ಜೆ.ಎನ್.ಯು ಅಂದರೆ ಜವಾಹರಲಾಲ್ ನೆಹರೂ ಯೂನಿವರ್ಸಿಟಿ. ಈ ವಿಶ್ವವಿದ್ಯಾಲಯ ನಾನಾ ಕಾರಣಗಳಿಂದ ಸದ್ದು ಮಾಡುತ್ತಲೇ ಇದೆ. ಎಡ ಮತ್ತು ಬಲ ವಿದ್ಯಾರ್ಥಿ ಸಂಘಟನೆಗಳು ಕಾರಣದಿಂದಾಗಿ ಬೇಡದ ವಿಷಯಕ್ಕೆಲ್ಲ ವಿಶ್ವ ವಿದ್ಯಾಲಯವನ್ನು ಬಳಸಿಕೊಳ್ಳಲಾಗಿದೆ. ಇದನ್ನೇ ಇಟ್ಟುಕೊಂಡು ಜೆಎನ್.ಯು ಸಿನಿಮಾ ಮಾಡಲಾಗಿದೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಜೆಎನ್.ಯು ಅಂದರೆ ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಎಂದು ತೋರಿಸಲಾಗಿದೆ. ಪೋಸ್ಟರ್ ಮಧ್ಯ ಭಾರತದ ನಕ್ಷೆ ಇದ್ದು, ಒಂದು ಶೈಕ್ಷಣಿಕ ಸಂಸ್ಥೆ ರಾಷ್ಟ್ರವನ್ನು ಒಡೆಯಬಹುದೆ? ಎನ್ನುವ ಪ್ರಶ್ನೆಯನ್ನೂ ಮಾಡಲಾಗಿದೆ. ಈ ಸಾಲುಗಳೇ ಅನೇಕರನ್ನು ಕೆರಳಿಸಿವೆ. ಹಾಗಾಗಿ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಜರದಿದ್ದಾರೆ.
ಏಪ್ರಿಲ್ 5ರಂದು ಈ ಸಿನಿಮಾವನ್ನು ತೆರೆಗೆ ತರಲು ಸಿದ್ಧವಾಗಿದ್ದು ನಟಿ ಊರ್ವಶಿ ರೌಟೇಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.