ಚಿಕ್ಕಬಳ್ಳಾಪುರ : ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಸಂದೀಪ್ ಆಯ್ಕೆ ತಡೆ ಹಿಡಿದು ಹೈಕಮಾಂಡ್ ಆದೇಶ ಹೊರಿಡಿಸಿರುವ ಬೆನ್ನಲ್ಲೇ ಸಂಸದ ಡಾ.ಕೆ ಸುಧಾಕರ್ ವಿರುದ್ಧ ಸಿಡಿದು ಬಿದ್ದಿರುವ ಸಂದೀಪ್ ರೆಡ್ಡಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂದೀಪ್ ರೆಡ್ಡಿ, ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಅಂಟಿದ ಬಹುದೊಡ್ಡ ಶಾಪ. ಆತನಿಂದ ಬಿಜೆಪಿಗೂ ಯಾವುದೇ ಲಾಭವಿಲ್ಲ, ಕ್ಷೇತ್ರವು ಅಭಿವೃದ್ಧಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಸುಧಾಕರ್ ಸ್ವಂತ ಬಲದಿಂದ ಸಂಸದರಾಗಿಲ್ಲ. ಸುಧಾಕರ್ ಚಾರಿತ್ರ್ಯ ಏನು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಲಿ. ಅವರು ಬಿಜೆಪಿಯಿಂದ ಗೆದ್ದು, ಬಿಜೆಪಿಯನ್ನು ಸರ್ವನಾಶ ಮಾಡಲು ಮುಂದಾಗಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ಸಮರ್ಪಕವಾಗಿಯೇ ನಡೆದಿದೆ. ಅದನ್ನು ಯಾರು ಪ್ರಶ್ನೆ ಮಾಡುವಂತಿರಲಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಂಡೆ ಜಿಲ್ಲಾಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ ಇದಕ್ಕೆ ತಕಾರರು ತೆಗೆಯುವ ಮೂಲಕ ತಮ್ಮ ಗುಣ ತೋರಿದ್ದಾರೆ. ಇನ್ನು ನೀನಾ..? ನಾನಾ..? ನೋಡೇಬಿಡೋಣ ಅಂತಾ ಸವಾಲ್ ಎಸೆದಿದ್ದಾರೆ.