ಬೆಂಗಳೂರು:– ನಗರ ಪೊಲೀಸರು ಎಂದಿನಂತೆ ಮತ್ತಷ್ಟು ಪ್ರಕರಣಗಳನ್ನ ಬಯಲಿಗೆಳೆದಿದ್ದಾರೆ. ಮೊಬೈಲ್ ಕಳ್ಳತನ, ಮಾದಕ ದ್ರವ್ಯ, ಸರಗಳ್ಳತನ, ಇತ್ಯಾದಿ ಅಫೆನ್ಸ್ ಗಳು ಹೆಚ್ಚುತ್ತಿರುವ ಬೆನ್ನಲ್ಲೆ ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಯಸ್ ಪೊಲೀಸರ ಕಾರ್ಯಾಚರಣೆಗಳ ಡೀಟೇಲ್ಸ್ ಇಲ್ಲಿದೆ..
ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದಿಂದ ತಿಲಾಂಜಲಿ: ಎಚ್.ಕೆ ಪಾಟೀಲ್!
ಇನ್ಸ್ಟಾಗ್ರಾಂ ಮೂಲಕ ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರೆಸಿ ಮಾರಾಟ ಮಾಡ್ತಿದ್ದ ಬಟ್ಟೆ ವ್ಯಾಪರಿಯನ್ನ ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ತವನೀಶ್ ಬಂಧಿತ ಆರೋಪಿಯಾಗಿದ್ದು, ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಿದ್ದಾರೆ. ತವನೀಶ್ ಮೂಲತಃ ದಾವಣಗೆರೆಯವನಾಗಿದ್ದು. ಬೆಂಗಳೂರಿನ ಚಿಕ್ಕಜಾಲದಲ್ಲಿ ವಾಸವಿರುವ ತವನೀಶ್ ಕಾಲೇಜು ಬಳಿ ಗಾಂಜ ಡೀಲ್ ಮಾಡ್ತಿದ್ದ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಹೊರಭಾಗದಲ್ಲಿ ಪಾರ್ಟಿಗಳಿಗೆ ಹೋಗ್ತಿದ್ದ ತವನೀಶ್ ಡಿಜೆ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ. ಇಲ್ಲಿ ಡ್ರಗ್ ಪೆಡ್ಲರ್ ಲಿಂಕ್ ಪಡೆದು ಗಾಂಜ, ಹೈಡ್ರೋ ಗಾಂಜ ತರಿಸಿ ಮಾರಾಟ ಮಾಡ್ತಿದ್ದ. ತವನೀಶ್ ಮೇಲ್ನೋಟಕ್ಕೆ ಬಟ್ಟೆ ವ್ಯಾಪಾರ ಮಾಡ್ತಿದ್ರೆ. ಅಷ್ಟೇಅಲ್ಲದೇ ವನೀಶ್ ಅಂಧ್ರಹಳ್ಳಿಯ ಕಾಲೇಜ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಲಾಕ್ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ.
ಅಷ್ಟೇ ಅಲ್ಲದೇ ರೈಲಿನ ಮೂಲಕ ಒಡಿಶಾದಿಂದ ಮಾದಕ ಪದಾರ್ಥಗಳನ್ನ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುವ ಯೋಜನೆ ಹೊಂದಿದ್ದ ಆರೋಪಿಯನ್ನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಬದ್ರುದ್ದೀನ್ ಬಂಧಿತ ಆರೋಪಿ. ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್ಗೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೆ ಸಹೋದರಿಯ ಮದುವೆ ಮಾಡುವ ಜವಾಬ್ದಾರಿ ಸಹ ಬದ್ರುದ್ದೀನ್ನ ಮೇಲಿತ್ತು. ಮಾದಕ ಪದಾರ್ಥಗಳನ್ನ ಮಾರಾಟ ಮಾಡಿದರೆ ಹೆಚ್ಚು ಆದಾಯವಿದೆ ಎಂದು ಸ್ನೇಹಿತರು ಯಾರಿಂದಲೋ ಸಲಹೆ ಪಡೆದಿದ್ದ ಬದ್ರುದ್ದೀನ್, ಸರಬರಾಜುದಾರರ ನಂಬರ್ ಪಡೆದು ಒಡಿಶಾಗೆ ತೆರಳಿದ್ದ.ಸೆಪ್ಟೆಂಬರ್ 2ರಂದು ದುರೊಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಆರೋಪಿಯನ್ನ ಗಾಂಜಾವಿದ್ದ ಬ್ಯಾಗ್ ಸಮೇತ ಪೊಲೀಸರು ಬಂಧಿಸಿದ್ದಾರೆ.ಆರೋಪಿಯ ವಶದಲ್ಲಿದ್ದ 1 ಲಕ್ಷ ಬೆಲೆ ಬಾಳುವ 5 ಕೆ.ಜಿ 20 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಇನ್ನು ಸರಗಳ್ಳತನ, ಮನೆಗಳ್ಳನ, ಡ್ರಗ್ ಪೆಡ್ಲರ್ ಗಳು ಪೊಲೀಸರ ಬಲೆಗೆ ಬಿದ್ದಿದ್ದು, ಅವರಿಂದಲೂ ಕೂಡ ಲಕ್ಷಾಂತರ ಮೌಲ್ಯದ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರೆದಿದೆ.