ಗದಗ: ರೈತರ ನಿದ್ದೆಗೆಡಿಸಿದ್ದ ಟ್ರಾಕ್ಟರ್ ಟ್ರೇಲರ್ ಕಳ್ಳತನ ಪ್ರಕರಣಗಳನ್ನು ಭೇಧಿಸೋ ಮೂಲಕ ಗದಗ ಜಿಲ್ಲೆಯ ಮುಂಡರಗಿ ಪೊಲೀಸರು ಇದೀಗ ರೈತಾಪಿ ವರ್ಗದ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಳ್ಳತನವಾಗಿದ್ದ ಟ್ರಾಕ್ಟರ್ ಟ್ರೇಲರ್ ಗಳನ್ನ ಪತ್ತೆ ಹಚ್ವೋ ಮೂಲಕ ರೈತರನ್ನ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಮುಂಡರಗಿ ತಾಲೂಕಿನ ಡಂಬಳ,
ಮೇವುಂಡಿ ಮತ್ತು ಕಲಕೇರಿ ಗ್ರಾಮಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಅನ್ನದಾತನ ಟ್ರೇಲರ್ ಗಳನ್ನ ಕದ್ದಿದ್ದರು ಆ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ವು. ಗದಗ ಎಸ್ಪಿ ಬಿ ಎಸ್ ನೇಮಗೌಡ ವೀಶೇಷ ತಂಡ ರಚನೆ ಮಾಡಿದ್ರು. ಇದೀಗ ಮುಂಡರಗಿ ಪೊಲೀಸರು ಪ್ರಕರಣ ಭೇಧಿಸಿದ್ದು ರೈತರೆಲ್ಲಾ ಸೇರಿಕೊಂಡು ಪೊಲೀಸರಿಗೆ ಸನ್ಮಾನ ಮಾಡೋ ಮೂಲಕ ಅಭಿನಂದಿಸಿದ್ದಾರೆ.