ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು.
ಇಂದು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿದ್ದು, ಪೊಲೀಸ್ ತನಿಖೆ ಬಗ್ಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.
IPL 2025: ಮುಂಬೈ ಜತೆ RCB ಒಳ ಒಪ್ಪಂದ!?: ಹರಾಜಿನಲ್ಲಿ ನಡೆದ ದ್ರೋಹದ ಬಗ್ಗೆ ಫ್ಯಾನ್ಸ್ ಕಿಡಿ!
ದರ್ಶನ್ ಮನೆಯಲ್ಲಿ ಸೀಜ್ ಆದ ಹಣಕ್ಕೂ ಕೊಲೆ ಕೇಸ್ಗೂ ಯಾವುದೇ ಸಂಬಂಧವಿಲ್ಲ, ಆದ್ರೂ ಪೊಲೀಸರು ಸಂಬಂಧ ಕಲ್ಪಿಸಿದ್ದಾರೆ ಎಂದು ಸಿವಿ ನಾಗೇಶ್ ಮಾಡಿದ್ರು.
ನಟನ ಪರ ವಕೀಲರು ದರ್ಶನ್ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಓದಿ ಹೇಳಿದ್ದಾರೆ. ನನ್ನನ್ನು ಕರ್ಕೊಂಡು ಹೋದ್ರೆ ಕೊಲೆಯಾದ ಸ್ಥಳದ ಬಗ್ಗೆ ಹೇಳ್ತೀನಿ. ವಿನಯ್ಗೆ ಹಣ ನೀಡಿದ ಸ್ಥಳ ಕೂಡ ತೋರಿಸ್ತೀನಿ ಎಂದಿದ್ದಾರೆ. ನಾನು ಧರಿಸಿದ್ದ ಬಟ್ಟೆ ನಮ್ಮ ಮನೆ ಒಳಗೆ ಇದೆ ತೋರಿಸ್ತೀನಿ ಅಂದಿದ್ದಾರೆ. ಜೂನ್ 14ರಂದು ಐಡಿಯಲ್ ಹೋಂ ನ ಮನೆಯಲ್ಲಿ ಮಹಜರು ಮಾಡಿದ್ದಾರೆ. ದರ್ಶನ್ ಜೂನ್ 11ರಂದು ಸ್ವಇಚ್ಚಾ ಹೇಳಿಕೆ ನೀಡಿದ್ರೇ ಜೂನ್ 14ಕ್ಕೆ ಹೋಗಿದ್ದಾರೆ. ಯಾಕೆ ತಡ ಮಾಡಿದ್ರು, ಇವ್ರು ಎವಿಡೆನ್ಸ್ಗಳನ್ನು ಸೃಷ್ಟಿ ಮಾಡಲು ತಡ ಮಾಡಿದ್ದಾರೆ ಎಂದು ಹೇಳಿದ್ರು.
ಚಪ್ಪಲಿ ಹಾಗೂ ಬಟ್ಟೆಗಳನ್ನು ತೋರಿಸ್ತೀನಿ ಅಂತ ದರ್ಶನ್ ಹೇಳಿದ್ರೆ, ಇವ್ರು ಶೂಗಳನ್ನು ಸೀಜ್ ಮಾಡಿದ್ದಾರೆ. ಯಾಕಂದರೆ ಆರೋಪಿ ಶೂನಲ್ಲಿ ಒದ್ದಿದ್ದಾರೆ ಅಂತ ಇವರೇ ಬರೆದುಕೊಂಡಿದ್ರಲ್ಲ ಹೀಗಾಗಿ ಚಪ್ಪಲಿ ಬದಲು ಶೂಗಳನ್ನು ಸೀಜ್ ಮಾಡಿದ್ದಾರೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.
ಮನೆಗೆಲಸದಾಕೆ ಬಟ್ಟೆಯನ್ನು ಸರ್ಫ್ ಪೌಡರ್ ಹಾಕಿ ಕುಕ್ಕಿ ಕುಕ್ಕಿ ಒಗೆದಿರೋದಾಗಿ ಹೇಳಿದ್ದಾರೆ. ಅಷ್ಟು ಜೋರಾಗಿ ಒಗೆದ ಮೇಲೆ ರಕ್ತದ ಕಲೆ ಸಿಗಲು ಹೇಗೆ ಸಾಧ್ಯ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ರು. ಅಷ್ಟೇ ಅಲ್ಲದೇ ರೇಣುಕಾಸ್ವಾಮಿ ರಕ್ತ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ಕಳುಹಿಸಿರೋ ಬಗ್ಗೆಯೇ ಅನುಮಾನ ಇದೆ ಎಂದು ವಾದ ಮಂಡಿಸಿದ್ರು.
ದರ್ಶನ್ ಮನೆಯಲ್ಲಿ 37 ಲಕ್ಷ 40 ಸಾವಿರ ಹಣ ಸೀಜ್ ಮಾಡಿದ್ದಾರೆ. ಜೂನ್ 18ರಂದು ದರ್ಶನ್ ಮನೆಯಲ್ಲಿ ಹಣ ಸೀಜ್ ಆಗಿದೆ. ನನಗೆ ಪರಿಚಯ ಇರುವ ಮೋಹನ್ ಅವರು ಈ ಹಣ ನೀಡಿದ್ದರು ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಮೋಹನ್ ಅವರು ಮೇ ತಿಂಗಳ ಮೊದಲ ವಾರದಲ್ಲೇ ಹಣ ಕೊಟ್ಟಿದ್ದಾರೆ. ಈ ಹಣಕ್ಕೂ ಕೊಲೆ ಕೇಸ್ಗೂ ಯಾವುದೇ ಸಂಬಂಧವಿಲ್ಲ. ಹಣವನ್ನ ಕೇಸ್ ಲಿಂಕ್ ಮಾಡಿದ್ದು ಸರಿಯಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ರು.
ಕೊಲೆ ಆಗುತ್ತೆ ಅಂತ ಮೊದಲೇ ತಿಳಿದು ಹಣ ತಂದು ಇಡಲು ಆಗುತ್ತಾ? ಈ ಕೇಸ್ನಲ್ಲಿ ಸುಳ್ಳಿನ ಕಥೆ ಎಣೆದಿದ್ದಾರೆ ಎಂದು ಸಿವಿ ನಾಗೇಶ್ ಹೇಳಿದ್ರು. ಸುಳ್ಳು ಮಾಡೋಕೆ ಒಂದು ಲಿಮಿಟ್ ಇರಬೇಕು ಇಲ್ಲಿ ತನಿಖೆ ಹಾದಿ ಹಾದಿ ತಪ್ಪಿದೆ ಎಂದು ಸಿವಿ ನಾಗೇಶ್ ಅವರು ವಾದ ಮಂಡಿಸಿದ್ರು.