ಗದಗ:- ಥರ್ಡ್ ಐ ಕ್ಯಾಮರಾದಿಂದ ತಪ್ಪಿಸಿಕೊಳ್ಳುವ ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದ್ದು, ಸುಮಾರು 300 ಕ್ಕೂ ಹೆಚ್ಚು ಬೈಕ್ ಗಳನ್ನ ಸೀಜ್ ಮಾಡಿದ್ದಾರೆ.
ಗದಗನಲ್ಲಿ ಕಳ್ಳದಾರಿ ಹಿಡಿದಿದ್ದ ಬೈಕ್ ಸವಾರರಿಗೆ ಸ್ಪೆಷಲ್ ಡ್ರೈವ್ ಮೂಲಕ ಚಾಟಿ ಬೀಸಲಾಗಿದ್ದು, ಸಿಪಿಐ, ಪಿಎಸ್ಐ ಗಳ ನೇತೃತ್ವದ 6 ತಂಡಗಳ ಮೂಲಕ ಸ್ಪೆಷಲ್ ಡ್ರೈವ್ ನಡೆದಿದೆ.
ಗದಗ ನಗರದ 6 ಪ್ರಮುಖ ಸರ್ಕಲ್ ಗಳಲ್ಲಿ ಢಿಫೆಕ್ಟಿವ್ ನಂಬರ್ ಪ್ಲೇಟ್ ಬೈಕ್ ಗಳಿಗೆ ದಂಡ ವಿಧಿಸಲಾಗಿದೆ. ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬರ್ ಫ್ಲೇಟ್ ಗೆ ಸ್ಟಿಕರ್ ಅಂಟಿಸಿರೋ ಬೈಕ್ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದೇ, ನಂಬರ್ ಪ್ಲೇಟ್ ಡಿಫೆಕ್ಟಿವ್ ಮಾಡಿ ಓಡಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಕೇಸ್ ಹಾಕಲಾಗಿದೆ.
ನಂಬರ್ ಪ್ಲೇಟ್ ಹೈಡ್ ಮಾಡಿ, ಫೇಕ್ ಮಾಡಿ ಓಡಾಡೋವ್ರ ಮೇಲೆ ಕ್ರಿಮಿನಲ್ ಕೇಸ್ ಗೆ ಪೊಲೀಸ್ ಇಲಾಖೆ ಮುಂದಾಗಿದೆ. ಒಂದೊಂದು ಪಾಯಿಂಟ್ನಲ್ಲಿ ಸುಮಾರು 50 ರಿಂದ 100 ಬೈಕ್ ಗಳ ಸೀಜ್ ಮಾಡಲಾಗಿದೆ.
ಟ್ರಾಫಿಕ್ ಪೊಲೀಸ್ ಸ್ಟೇಷನ್ ನಲ್ಲಿ ನೂರಾರು ಬೈಕ್ ಗಳು ಇದ್ದು, ಬೈಕ್ ಸವಾರರಿಂದ ಪೊಲೀಸ್ ಭವನದ ಆವರಣ ತುಂಬಿ ತುಳುಕುತಿದೆ. ಸ್ವತಃ ಫಿಲ್ಡಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರು, ಪ್ರತಿಯೊಂದ ಸರ್ಕಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.