ಬೆಂಗಳೂರು:- ರಸ್ತೆಯ ಪಕ್ಕದಲ್ಲಿನ ತಡೆಗೋಡೆ ಇಲ್ಲದ ಜಾಗಕ್ಕೆ ಹೋಗಿ ಮೂರ್ತ ವಿಸರ್ಜನೆಗೆ ಹೋಗಿದ್ದ ವ್ಯಕ್ತಿ ವಾಪಸ್ ಹೆಣವಾಗಿ ಬಂದಿದ್ದಾನೆ.
ಮೂತ್ರ ವಿಸರ್ಜನೆಯ ನಂತರ ನೀರು ಕುಡಿತೀರಾ? ಹಾಗಿದ್ರೆ ಎಚ್ಚರ, ಮೊದಲು ಇದನ್ನು ತಿಳಿಯಿರಿ!
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಲಕ್ಷ್ಮಿಪುರದ ನಿವಾಸಿ ಹರೀಶ್ ನಿನ್ನೆ ರಾತ್ರಿ 9.5ರ ಸುಮಾರು ತನ್ನ ಚಿಕ್ಕಮ್ಮನ ಮನೆಗೆ ತೆರಳಬೇಕಿತ್ತು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್, ರಾತ್ರಿ ಊಟ ತೆಗೆದುಕೊಂಡು ತನ್ನ ಮನೆಗೆ ಹೊರಟಿದ್ದ. ಈ ವೇಳೆ ರಸ್ತೆಯ ಪಕ್ಕದಲ್ಲಿನ ತಡೆಗೋಡೆ ಇಲ್ಲದ ಜಾಗಕ್ಕೆ ಹೋಗಿ ಮೂರ್ತ ವಿಸರ್ಜನೆಗೆ ಹೋಗಿದ್ದಾನೆ ಅಷ್ಟೇ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದಾನೆ.
ಕುಡಿತದ ಚಟ ಬಿಡಿಸಲು ರಿಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು, ಅಲ್ಲಿಂದ ಬಂದು ಸ್ವಲ್ಪ ದಿನ ಮನೆಯಲ್ಲಿದ್ದ. ಬಳಿಕ ವಾರದ ಹಿಂದೆ ಗಾರೆ ಮೇಸ್ತ್ರಿ ಕೆಲಸಕ್ಕೆ ಸೇರಿದ್ದ, ಹರೀಶ್ ಮೃತಪಡುವುದಕ್ಕೂ ಮೊದಲು ತೇಲಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..ಆ ದೃಶ್ಯದಲ್ಲಿ ಕಾಣುವ ಹಾಗೆ ಓರ್ವ ವ್ಯಕ್ತಿ ಈತ ಬೀಳುವುದನ್ನ ಕಂಡರೂ ಕಾಣದಂತೆ ಹೋಗಿದ್ದು ಶೋಚನೀಯ.
ಸದ್ಯಕ್ಕೆ ಮೃತ ಹರೀಶ್ ನ ಮೃತದೇಹವನ್ನ MS ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.