ಬೆಂಗಳೂರು: ಹೊಸ ವರ್ಷದಂದು ರಾಜ್ಯದ ಜನತೆ ದೇವರ ಮೊರೆ ಹೋಗಿದ್ದಾರೆ. ವರ್ಷದ ಮೊದಲ ದಿನದಂದು ಎಲ್ಲಾ ದೇಗುಗಳಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.
ಬೆಂಗಳೂರಿನ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಬೆಂಗಳೂರಿನ ಶಕ್ತಿ ದೇವತೆ ಅಣ್ಣಮ್ಮ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತಿದೆ. ಈ ವರ್ಷ ಒಳ್ಳೆಯದಾಗಲಿ ಅಂತಾ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇಗುಲದಲ್ಲೂ ಜನಸಾಗರ ಇದೆ. ಮಧ್ಯಾಹ್ನ 1 ಗಂಟೆಗೆ ಕ್ಲೋಸ್ ಆಗುತ್ತಿದ್ದ ದೇಗುಲ ಇಂದು 2:30ರವರೆಗೆ ಇರಲಿದೆ. ಭಕ್ತರ ಸಂಖ್ಯೆ ಹೆಚ್ಚಳವಾಗಿದ್ರಿಂದ ದೇಗುಲದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ ನೆರೆದಿದ್ದು, ಬೆಳ್ಳಂಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಜನ ನಿಂತಿದ್ದಾರೆ.