ಬೆಂಗಳೂರು: ಕಲಾವಿದರ ಮೇಲೆ ದಬ್ಬಾಳಿಕೆ, ದೌರ್ಜನ್ಯದ ಮಾತು ಆಡೋದು ರಾಜ್ಯದ ಜನತೆ ಸಹಿಸೋದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಧಕ್ಕೆ ಆದ ಸಮಯದಲ್ಲಿ ಕಲಾವಿದರು ಹೊರಗೆ ಬಂದು ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ.
ಕಲಾವಿದರು ಗೌರವದ ಬದುಕು ಕಟ್ಟಿಕೊಂಡಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡುತ್ತಾರೆ. ಸಾಲ ಮಾಡಿ ಸಿನಿಮಾ ಮಾಡುತ್ತಾರೆ. ಕಲಾವಿದರ ಮೇಲೆ ದಬ್ಬಾಳಿಕೆ, ದೌರ್ಜನ್ಯದ ಮಾತು ಆಡೋದು ರಾಜ್ಯದ ಜನತೆ ಸಹಿಸೋದಿಲ್ಲ ಎಂದು ಹರಿಹಾಯ್ದರು.
Blinkit Delivery: ಕೇವಲ 10 ನಿಮಿಷದಲ್ಲಿ ಆ್ಯಪಲ್ ಉತ್ಪನ್ನ ಡೆಲಿವರಿ ಮಾಡಲಿರುವ ಬ್ಲಿಂಕಿಟ್..!
ರಾಜ್ಯದಲ್ಲಿ ಸಾಕಷ್ಟು ಸರ್ಕಾರಗಳು ಬಂದು ಹೋಗಿವೆ. ರಾಜ್ಯದ ಜನ ಅನೇಕ ಸಿಎಂಗಳನ್ನ ನೋಡಿದ್ದಾರೆ. ಆದರೆ ಇಂತಹ ಹೇಳಿಕೆ ಯಾರೂ ಕೊಟ್ಟಿಲ್ಲ. ಹೀಗೆ ಮಾತಾಡಿ ಕಲಾವಿದರನ್ನ ಪ್ರಚೋದನೆ ಮಾಡೋದು ಸರಿಯಲ್ಲ. ಅವರ ವಾರ್ನಿಂಗ್ಗೆ ಯಾರೂ ಹೆದರಿ ಕೂರೋದಿಲ್ಲ ಎಂದು ವಾಗ್ದಾಳಿ ನಡೆಸಿದರು.