ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತಂದೆ ಮಕ್ಕಳ ಕೈಗೆ ಪಕ್ಷ ಸಿಕ್ಕಿದೆ, ಕಾರ್ಯಕರ್ತರು ಪರದಾಡ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ ಎಂದರು.
ಪಕ್ಷ ತಂದೆ ಮಕ್ಕಳ ಕೈಗೆ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಯತ್ನಾಳ್, ಒಕ್ಕಲಿಗರಾದ ಸಿ.ಟಿ.ರವಿ, ಹಿಂದುಳಿದ ನನಗೆ ಯಾಕೆ ಕೊಟ್ಟಿಲ್ಲ. ಪಕ್ಷ ಸಂಘಟನೆ ದೃಷ್ಟಿಯಿಂದ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅದು ಬಿಟ್ಟು ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಟ್ಟಿದ್ದಾರೆ? ಅವರಿಗೆ ಮಾತ್ರ ಲಿಂಗಾಯತರು ಸಿಮೀತ ಆಗಿಲ್ಲ. ನಮ್ಮ ಜೊತೆ ಕೂಡಾ ಈ ಸಮಾಜ ಇದೆ. ಸ್ಪರ್ಧೆ ಬಗ್ಗೆ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗ್ತಿದೆ. ರಾಜ್ಯದ ವಿವಿಧ ಭಾಗದಿಂದ ಜನ ಬಂದು ಚುನಾವಣೆ ಮಾಡುತ್ತಾರೆ ಎಂದರು.