ವಿಜಯಪುರ: ಕಳೆದ ಆರೇಳು ತಿಂಗಳುಗಳಿಂದ ಬಂದ್ ಆಗಿದ್ದಂತಹ ಉದ್ಯಾನವ ಮತ್ತೆ ಈಗ ಆರಂಭವಾಗಿದೆ. ಜೊತೆಗ ಉದ್ಯಾನವನಕ್ಕೆ ಹೈಟೇಕ್ ಟಚ್ ಕೂಡಾ ನೀಡಲಾಗಿದೆ. ಈಗ ಅದೆಷ್ಟೋ ಜನ ಪ್ರವಾಸಿಗರು ಒಂದು ದಿನದ ಪಿಕ್ನಿಕ್ ಅಂತಾ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳಿಗೂ ಹಾಟ್ ಫೇವರೇಟ್ ಪ್ಲೇಸ್ ಆಗಿ ಮಾರ್ಪಟ್ಟಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಹೌದು ವಿಜಯಪುರ ನಗರದ ಹೊರಭಾಗದ ಭೂತನಾಳ ಕೆರೆಯ ಬಳಿಯ ಉದ್ಯಾನವನಕ್ಕೆ ಈಗ ಹೈಟೇಕ್ ಸ್ಪರ್ಷ ನೀಡಲಾಗಿದೆ. ಒಳಗೆ ಹೋದರೆ ಸಾಕು ನವಿಲುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಜೊತೆಗೆ ಒಳಗೆ ಹೋದಂತೆ ಮಂಗಗಳು, ಆನೆ ಸೇರಿದಂತೆ ವಿವಿಧ ಪ್ರಾಣಿಗಳ ಕೆತ್ತನೆ ಕೂಡಾ ಮಾಡಲಾಗಿದೆ. ಇನ್ನೂ ಮಕ್ಕಳಿಗಾಗಿ ಆಟಿಗೆ ಸಾಮಾನುಗಳನ್ನು ಸಹಿತ ಇಲ್ಲಿ ಇಡಲಾಗಿದೆ. ಈಗ ಈ ಉದ್ಯಾನವನಕ್ಕೆ ಹೈ ಟೇಕ್ ಸ್ಪರ್ಷ ನೀಡಲಾಗಿದೆ. ಮೊದಲಿಗಿಂತಲೂ ಈ ಉದ್ಯಾನವನಕ್ಕೆ ಈಗ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ…
ಕಳೆದ ಆರೇಳು ತಿಂಗಳು ಗಳ ಕಾಲ ಈ ಉದ್ಯಾನವವನ್ನು ಬಂದ್ ಮಾಡಲಾಗಿತ್ತು. ಅದೆಷ್ಟೋ ಜನ ಬಂದ್ ದಾರಿಗೆ ಸುಂಕವಿಲ್ಲ ಎಂಬಂತೆ ಬಂದು ಬಂದು ನಿರಾಸೆಯಿಂದ ವಾಪಸ್ ಹೋಗುತ್ತಿದ್ದರು, ಇದಕ್ಕೆ ಕಾರಣ ಉದ್ಯಾನವನದಲ್ಲಿ ಕಾಮಗಾರಿ ನಡೆದಿತ್ತು. ಈಗ ಸಂಪೂರ್ಣ ಇದರ ಮೇಲುಸ್ತುವಾರಿ ಅರಣ್ಯ ಇಲಾಖೆಯವರು ನೋಡಿಕೊಳ್ಳುತ್ತಿದ್ದು. ಚಿಕ್ಕ ಮಕ್ಕಳಿಗೆ 10 ರೂಪಾಯಿ ಹಾಗೂ ದೊಡ್ಡವರಿಗೆ 20 ರೂಪಾಯಿ ಟಿಕೇಟ್ ದರ ನಿಗದಿ ಮಾಡಿದ್ದಾರೆ. ಮೊದಲಿಗೆ ಕೇವಲ 20 ರ 25 ಸಾವಿರ ಪ್ರತಿ ತಿಂಗಳ ಕಲೆಕ್ಷನ್ ಆಗುತ್ತಿತ್ತು ಆದರೆ ಈಗ ಹೈಟೇಕ್ ಟಚ್ ನೀಡಿದ ಕಾರಣ ಪ್ರತಿ ತಿಂಗಳು 1 ಲಕ್ಷಕ್ಕೂ ಅಧಿಕ ಹಣ ಸಂಗ್ರಹಣೆ ಯಾಗುತ್ತಿದೆ. ಇನ್ನೂ ಅದೆಷ್ಟೋ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಹಿತ ಒಂದು ದಿನದ ಪಿಕ್ ನಿಕ್ ಗೆ ಎಂದು ಇಲ್ಲಿಗೆ ಕರೆ ತರುತ್ತಾರೆ. ಹೀಗಾಗಿ ಇಲ್ಲಿನ ಇನ್ ಕಮ್ ಸಹಿತ ಹೆಚ್ಚಾಗುತ್ತಿದೆ…
ಕಳೆದ ಹಲವು ತಿಂಗಳುಗಳಿಂದ ಬಂದ್ ಆಗಿದ್ದ ಉದ್ಯಾನವನ ಈಗ ಮರಳಿ ಆರಂಭಗೊಂಡ ಹಿನ್ನಲೆ ಪ್ರವಾಸಿಗರ ಹಾಟ್ ಫೇವರೇಟ್ ಸ್ಥಳವಾಗಿ ಈಗ ಭೂತನಾಳ ಉದ್ಯಾನವನ ಮಾರ್ಪಟ್ಟಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸುವ ಮೂಲಕ ಎಂಜಾಯ್ ಮಾಡಲಿ ಎಂಬುದು ನಮ್ಮ ಆಶಯ…