ಚಿತ್ರದುರ್ಗ:- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕೊಲೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪೊಲೀಸರ ಮೇಲೆ ವಿದೇಶಿ ಪ್ರಜೆಗಳಿಂದ ಹಲ್ಲೆ ಕೇಸ್: ಎಂಟು ಮಂದಿ ಅರೆಸ್ಟ್!
ಈ ಸಂಬಂಧ ಮಾತನಾಡಿದ ಅವರು,ಗದಗನಲ್ಲಿ ಮನೆ ನುಗ್ಗಿದ ಹಂತಕರು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡುತ್ತಾರೆ ಮತ್ತು ಹುಬ್ಬಳ್ಳಿಯ ಕಾಲೇಜು ಅವರಣದಲ್ಲಿ ಕೊಲೆ ನಡೆಯುತ್ತದೆ ಅಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಮತ್ತು ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಅಪರಾಧಗಳ ಸರಿಯಾದ ತನಿಖೆ ನಡೆಸುವ ಬದಲು ಸರ್ಕಾರ ಉಡಾಫೆಯ ಉತ್ತರಗಳನ್ನು ನೀಡುತ್ತದೆ. ಒಂದು ನಿರ್ದಿಷ್ಟ ವರ್ಗದ ಓಲೈಕೆಯಲ್ಲಿ ತೊಡಗಿರುವುದರಿಂದ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಜರುಗಿಸದ ಕಾರಣ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಪ್ರಮಾಣ ಏರುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಒಂದು ಸಮುದಾಯದ ವೋಟು ಗಿಟ್ಟಸಲು ಈ ಸರ್ಕಾರ ಅಡಳಿತವನ್ನು ಅಧೋಗತಿಗೆ ಕೊಂಡೊಯ್ದಿದೆ, ಜನ ಈಗ ತೀರ್ಮಾನಿಸಬೇಕಾದ ಅವಶ್ಯಕತೆಯಿದೆ ಎಂದರು.