ಬೆಂಗಳೂರು:- ಭಾರತದಲ್ಲಿ ರಾಮಜಪ ಶುರುವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಮರ್ಯಾದಾ ಪರುಷೋತ್ತಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೇ ಶುರುವಾಗಿದೆ. ಮತ್ತೊಂದೆಡೆ ಭಾರತದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಜನವರಿ 22ರಂದೇ ಹೆರಿಗೆ ಆಗಲಿ ಎಂದು ಗರ್ಭಿಣಿಯರು ಬಯಸುತ್ತಿದ್ದಾರೆ. ಈ ಟ್ರೆಂಡ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಶುರುವಾಗಿದೆ.
ರಾಮ ಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಯ ದಿನವೇ ಡೆಲಿವರಿ ಡೇಟ್ ನೀಡುವಂತೆ ರಿಕ್ವೇಸ್ಟ್ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಯ ದಿನವೇ ಸಿಜೀರಿನ್ ಮಾಡಿಸಿ ಅಂತ ಗರ್ಭಿಣಿಯರು ವೈದ್ಯರ ಪಟ್ಟು ಹಿಡಿದಿದ್ದಾರೆ.
ರಾಮ ಮೂರ್ತಿ ಪ್ರತಿಷ್ಠಾಪನೆಯ ದಿನ ತುಂಬಾ ಒಳ್ಳೆಯ ದಿನವಾಗಿದೆ. ಹೀಗಾಗಿ ಸಾಕಷ್ಟು ಗರ್ಭಿಣಿಯರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೇವರಿ 22 ರಂದೇ ಡೆಲಿವೇರಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಸಾಕಷ್ಟು ಗರ್ಭಿಣಿಯರಿಂದ ಜನೇವರಿ 22 ದಿನಕ್ಕೆ ರಿಕ್ವೇಸ್ಟ್ ಬರ್ತಿವೆ . ಆದ್ರೆ ಎಲ್ಲರಿಗೂ ಅವತ್ತೆ ಡೆಲಿವರಿ ಮಾಡುವುದಕ್ಕೆ ಕಷ್ಟ ಸಾಧ್ಯ ಅಂತ ವೈದ್ಯರು ಹೇಳುತ್ತಿದ್ದಾರೆ. ಡೆಲಿವರಿ ನಿಗಧಿಯಾದ ದಿನಾಂಕಕ್ಕಿಂತ ಒಂದು ವಾರದ ಹಿಂದೆ ಮುಂದೆ ಅಂತರ ಇದ್ರೆ ಮಾತ್ರ. ಈ ರೀತಿ ಡೆಲಿವರಿ ಮಾಡಿಸಿಕೊಳ್ಳು ಅವಕಾಶ ಇದೆ. ಅತಂವರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ ಅಂತಿದ್ದಾರೆ ವೈದ್ಯರು. ಆದ್ರೆ ಸದ್ಯ ಡೆಲಿವರಿಗೆ ಹತ್ರದ ದಿನಾಂಕ ಇರುವವರು ಜನೇವರಿ 22ರಂದೇ ಡೆಲಿವರಿಗೆ ಮುಂದಾಗಿದ್ದಾರೆ.