ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 27ರಂದು ತನ್ನ ವಾರ್ಷಿಕ ಮಹಾಸಭೆ ನಡೆಸಲಿದ್ದು, ಇದರ ಬೆನ್ನಲ್ಲೇ ಸೆಪ್ಟೆಂಬರ್ 28ರಂದು (ಶನಿವಾರ) ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅನ್ನು ಉದ್ಘಾಟನೆ ಮಾಡಲಿದೆ ಎಂಬುದು ಬೆಳವಣಿಗೆಗೆ ಹತ್ತಿರದ ಮೂಲಗಳಿಂದ ಖಾತ್ರಿಯಾಗಿದೆ. ನೂತನ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಯ ಉದ್ಘಾಟನೆಯನ್ನು ಬಿಸಿಸಿಐ ಖಾತ್ರಿ ಪಡಿಸಿದೆ.
ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಶಾಕ್: ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆ!
ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ ಈ ಕುರಿತಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಬಿಸಿಸಿಐ ಕಾರ್ಯದರ್ಶಿ ಸ್ಥಾನ ಬಿಟ್ಟಿರುವ ಜಯ ಶಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ನವೆಂಬರ್ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಇ-ಮೇಲ್ ಸೂಕ್ತವಾಗಿದೆ ಎಂದು ಭಾವಿಸಿದ್ದೇನೆ. ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸೆಪ್ಟೆಂಬರ್ 28ರಂದು ಉದ್ಘಾಟಿಸಲಾಗುತ್ತಿದ್ದು, ಈ ಮೂಲಕ ನಿಮ್ಮನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿದ್ದೇನೆ. ನೂತನ ಎನ್ಸಿಎ ಆವರಣದಲ್ಲಿ 3 ಸುಸಜ್ಜಿತ ಕ್ರಿಕೆಟ್ ಗ್ರೌಂಡ್ ಕಾಣಬಹುದು. 45 ಪ್ರಾಕ್ಟೀಸ್ ಪಿಚ್ಗಳು ಇರಲಿವೆ. ಒಳಾಂಗಣ ಕ್ರಿಕೆಟ್ ಪಿಚ್ಗಳಿವೆ. ಒಲಿಂಪಿಕ್ಸ್ ಗಾತ್ರದ ಸ್ವಿಮಿಂಗ್ ಪೂಲ್ ಮತ್ತು ಅತ್ಯಾಧುನಿಕ ತರಬೇತಿ ವ್ಯವಸ್ಥೆಗಳಿರಲಿವೆ. ಕ್ರೀಡಾ ವಿಜ್ಞಾನ ವ್ಯವಸ್ಥೆ ಮತ್ತು ಪುನಶ್ಚೇತನ ಶಿಬಿರದ ವ್ಯವಸ್ಥೆ ಒಳಗೊಂಡಿದೆ. ಈ ವ್ಯವಸ್ಥೆಯು ರಾಷ್ಟ್ರೀಯ ತಂಡದ ಆಟಗಾರರ ಮತ್ತು ಭವಿಷ್ಯದ ಆಟಗಾರರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ,” ಎಂದು ಜಯ ಶಾ ಬರೆದಿರುವ ಇ-ಮೇಲ್ನಲ್ಲಿ ನಮೂದಿಸಲಾಗಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.