ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಸಲುವಾಗಿ ನೆದರ್ಲೆಂಡ್ಸ್ ಕ್ರಿಕೆಟ್ ಮಂಡಳಿ ತನ್ನ 15 ಆಟಗಾರರ ಬಲಿಷ್ಠ ಡಚ್ ಪಡೆಯನ್ನು ಪ್ರಕಟ ಮಾಡಿದೆ.
ಡಚ್ ಕ್ರಿಕೆಟ್ ಮಂಡಳಿ ಸ್ಪೋಟಕ ಬ್ಯಾಟರ್ ಮೈಕಲ್ ಲೆವಿಟ್, ವೇಗಿ ಕೈಲ್ ಕ್ಲೀಯ್ನ್ ಮತ್ತು ಎಡಗೈ ಸ್ಪಿನ್ನರ್ ಟಿಮ್ ಪ್ರಿಂಗ್ಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅಚ್ಚರಿ ಎಂಬಂತೆ ಅನುಭವಿ ಆಲ್ರೌಂಡರ್ಗಳಾದ ರಾಲ್ಫ್ ವ್ಯಾನ್ ಡೆರ್ ಮರ್ವ್ ಮತ್ತು ಕಾಲಿನ್ ಅಕೆರ್ಮನ್ ಅವರನ್ನು ತಂಡದಿಂದ ಕೈಬಿಟ್ಟಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಕ್ಯಾನ್ಸರ್ ರೋಗಿಗಳಿಗೆ ಶುಭ ಸುದ್ದಿ: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವಿ ಬ್ಯಾಟರ್ ಸ್ಕಾಟ್ ಎಡ್ವರ್ಡ್ಸ್ ಅವರನ್ನೇ ಕ್ಯಾಪ್ಟನ್ ಆಗಿ ಡಚ್ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ. ತಂಡದಲ್ಲಿ ಬಾಸ್ ಡೆ ಲೀಡೆ, ಪಾಲ್ ವ್ಯಾನ್ ಮೂಕೆರೆನ್, ತೇಜಾ ನಿಡಮನುರು, ಲೋಗನ್ ವ್ಯಾನ್ ಬೀಕ್, ಮ್ಯಾಕ್ಸ್ ಒಡೋವ್ಡ್ ಮತ್ತು ವೆಸ್ಲೀ ಬರ್ರೇಸಿ ಅವರಂತಹ ಅನುಭವಿ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ನೆದರ್ಲೆಂಡ್ಸ್ ಟಿ20 ತಂಡ ಹೀಗಿದೆ
ಸ್ಕಾಟ್ ಎಡ್ವರ್ಡ್ಸ್ (ನಾಯಕ), ಆರ್ಯನ್ ದತ್, ಬಾಸ್ ಡೆ ಲೀಡೆ, ಡ್ಯಾನಿಯೆಲ್ ಡೊರ್ಮನ್, ಫ್ರೆಡ್ ಕ್ಲಾಸೆನ್, ಕೈಲ್ ಕ್ಲೀಯ್ನ್, ಲೋಗನ್ ವ್ಯಾನ್ ಬೀಕ್, ಮ್ಯಾಕ್ಸ್ ಒಡೋವ್ಡ್, ಮೈಕಲ್ ಲೆವಿಟ್, ಪಾಲ್ ವ್ಯಾನ್ ಮೀಕೆರೆನ್, ಸೈಬ್ರಾಂಡ್ ಎಂಗಲ್ಬ್ರೀಚ್, ತೇಜಾ ನಿಡಮನುರು, ಟಿಮ್ ಪ್ರಿಂಗ್ಲ್, ವಿಕ್ರಮ್ ಸಿಂಗ್, ವಿವ್ ಕಿಂಗ್ಮಾ, ವೆಸ್ಲೀ ಬರ್ರೇಸಿ.
![](https://ainlivenews.com/wp-content/uploads/2024/01/Ad-Banner-copy-scaled.jpg)