ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಅಗಲಿ 21 ವರ್ಷವಾದರೂ ಇಂದಿಗೂ ಎಲ್ಲರ ಮನದಲ್ಲಿ ಅಜಾರಮರವಾಗಿದ್ದಾರೆ. ಕಾರಣ ಆಕೆಯ ಚೊಚ್ಚಲ ನಟನೆ ಹಾಗೂ ತನ್ನ ಸೌಂದರ್ಯದ ಮೂಲಕ ಎಲ್ಲರ ಮನದಲ್ಲಿ ನೆಲೆದಿದ್ದಾಳೆ. ಸಿನಿಮಾ ಅಷ್ಟೇ ಅಲ್ಲದೇ 2004ರಲ್ಲಿ ರಾಜಕೀಯಕ್ಕೂ ಕಾಲಿಟ್ಟ ಇವರು, ಮತ ಕೇಳಲು ಏಪ್ರಿಲ್ 17 ರಂದು ಹೋಗದೆ ಇದ್ದಿದ್ದರೇ ಬಹುಷಃ ಸಿನಿಮಾದ ಮೂಲಕ ಇಂದಿಗೂ ತೆರೆಯ ಮೇಲೆ ಇರುತ್ತಿದ್ದರೆನ್ನಿಸುತ್ತದೆ.
ಇದೀಗ ನಟಿ ಸಂದರ್ಯಾ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗುತ್ತಿದೆ. ಅವರ ಸಾವು ಆಕಸ್ಮಿಕ ಅಲ್ಲವೇ ಅಲ್ಲ ಎಂದು ವ್ಯಕ್ತಿಯೋರ್ವ ದೂರು ದಾಖಲು ಮಾಡಿದ್ದಾನೆ. ಅಲ್ಲದೆ, ಈ ಸಾವಿಗೆ ತೆಲುಗು ನಟ, ನಿರ್ಮಾಪಕ ಮೋಹನ್ ಬಾಬು ಕಾರಣ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದಾನೆ.
ವಾರಕ್ಕೊಮ್ಮೆ ಒಂದು ಲೋಟ ಕಬ್ಬಿನ ರಸ ಕುಡಿದ್ರೆ ಸಾಕು ಈ ರೋಗಗಳಿಂದ ಶಾಶ್ವತ ಪರಿಹಾರ ಸಿಗುತ್ತೆ..!
ಹೌದು ಕೌಟುಂಬಿಕ ಸಮಸ್ಯೆ ಕಾರಣದಿಂದ ಮೋಹನ್ ಬಾಬು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಅವರು ಸೌಂದರ್ಯಾ ಸಾವಿನ ಪ್ರಕರಣದಲ್ಲಿ ಸಮಸ್ಯೆ ಎದುರಿಸಿದ್ದಾರೆ. ಆಂಧ್ರ ಪ್ರದೇಶದ ಖಮ್ಮಾಮ್ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ಮೋಹನ್ ಬಾಬು ಕೈವಾಡ ಇದೆ ಎಂದು ದೂರಲಾಗಿದೆ. ಚಿಟ್ಟಿಮಲ್ಲು ಎಂಬುವವರು ಈ ದೂರು ನೀಡಿದ್ದಾರೆ.
‘ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್ನಲ್ಲಿರುವ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದರಿಂದ ಈ ಕೊಲೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೌಂದರ್ಯಾ ಅವರ ಸಾವಿನ ಬಳಿಕ ಈ ಜಾಗ ಮಾರುವಂತೆ ಅವರ ಕುಟುಂಬದವರಿಗೆ ಮೋಹನ್ ಬಾಬು ಒತ್ತಡ ಹೇರಿದ್ದಾರೆ ಎಂದು ದೂರನಲ್ಲಿ ತಿಳಿಸಲಾಗಿದೆ. ಆ ಬಳಿಕ ಮೋಹನ್ ಬಾಬು ಅವರು ಅಕ್ರಮವಾಗಿ ಈ ಜಾಗವನ್ನು ಪಡೆದುಕೊಂಡರು ಎನ್ನಲಾಗಿದೆ. ಸದ್ಯ ದೂರು ನೀಡಿದ ಚಿಟ್ಟಿಮಲ್ಲು ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಕೋರಿದ್ದಾರೆ. ಅಲ್ಲದೆ ಈ ಜಾಗವನ್ನು ಸರ್ಕಾರದವರು ವಶಕ್ಕೆ ಪಡೆದು ಅಗತ್ಯ ಇರುವ ವೃದ್ಧಾಶ್ರಮದವರಿಗೆ ನೀಡುವಂತೆ ಕೋರಿದ್ದಾರೆ.
ದೂರು ನೀಡಿದ ವ್ಯಕ್ತಿ ಹೇಳುವಂತೆ ಮೋಹನ್ ಬಾಬು ಅವರು ಆರು ಎಕರೆ ಜಾಗದ ಕಾರಣಕ್ಕೆ ಸೌಂದರ್ಯಾ ಅವರನ್ನು ಮುಗಿಸಿದರು ಎಂದಿದ್ದಾರೆ. ಹಾಗಾದಲ್ಲಿ ಮೋಹನ್ ಬಾಬು ಅವರು ವಿಮಾನದಲ್ಲಿ ತಾಂತ್ರಿಕ ದೋಷ ಬರುವಂತೆ ಮಾಡಿದ್ದರೇ? ಇದಕ್ಕೆ ಈಗ ಉತ್ತರ ಕಂಡು ಹಿಡಿಯೋದು ಬಲುಕಷ್ಟ.
ಅಂದಿನ ಬ್ಯೂಟಿ ಕ್ವೀನ್ ಹಲವು ಭಾಷೆಗಳ ನಟಿಸಿದ್ದರೂ ಹೆಚ್ಚು ತೆಲುಗು ಚಿತ್ರಗಳನ್ನು ಮಾಡಿ ಪ್ರೇಕಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಟಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಟ ವಿಷ್ಣುವರ್ಧನ್ ಸೇರಿದಂತೆ ಕಮಲ್ ಹಾಸನ್ , ರಜನಿಕಾಂತ್ ಅವರಂತಹ ಸೂಪರ್ಸ್ಟಾರ್ಗಳೊಂದಿಗೆ ಕೆಲಸ ಮಾಡಿದ್ದರು.
ಹಿಂದಿಯ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆಯಲ್ಲಿನ ‘ಸೂರ್ಯವಂಶಂ’ ಚಿತ್ರ ಅವರಿಗೆ ಬಹು ದೊಡ್ಡ ಖ್ಯಾತಿ ತಂದು ಕೊಟ್ಟಿತ್ತು. ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್ ಜೊತೆಗೆ ಸಿಪಾಯಿ ಸಿನಿಮಾ ಮಾತ್ರವಲ್ಲದೇ, ಬ್ಲಾಕ್ ಬಸ್ಟರ್ ಅಪ್ತಮಿತ್ರ ಚಿತ್ರದಲ್ಲಿ ಗಂಗಾ ಪಾತ್ರಧಾರಿಯ ಆಕೆಯ ನಟನೆ ಇಂದಿಗೂ ಮೈ ಜುಮ್ಮೆನಿಸುತ್ತೆ.
2004ರಲ್ಲಿ ಲೋಕಸಭೆ ಚುನಾವಣೆ ವೇಳೆ ಮತ ಕೇಳುವ ಸಲುವಾಗಿ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ವಿಮಾನದಲ್ಲಿ ಹೋಗಬೇಕಿತ್ತು. ಆ ವೇಳೆ ವಿಮಾನವು 100 ಅಡಿ ಎತ್ತರಕ್ಕೆ ಹಾರುತ್ತಿದ್ದಂತೆ ಪತನ ಗೊಂಡಿದೆ. ಪತನಗೊಂಡ ಪರಿಣಾಮ ಎಲ್ಲರ ಪ್ರೀತಿಗೆ ಪಾತ್ರವಾದ ನಟಿ ನಟಿ ಸೌಂದರ್ಯಳನ್ನು ಕಳೆದುಕೊಳ್ಳಬೇಕಾಯಿತು.