ರಾಮನಗರ: ರಸ್ತೆ ಅಪಘಾತದಲ್ಲಿಗಂಭೀರವಾಗಿ ಗಾಯಗೊಂಡಿದ್ದ ಗಾಯಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಬಿಜೆಪಿ ಸಂಸದ ಡಾ.ಸಿ.ಎನ್ ಮಂಜುನಾಥ್ ಮಾನವೀಯತೆ ಮೆರೆದಿರುವ ಘಟನೆ ರಾಮನಗರದ ಕನಕಪುರ- ಸಾತನೂರು ಮಾರ್ಗ ಮಧ್ಯೆ ನಡೆದಿದೆ. ಅದೇ ಮಾರ್ಗದಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತವನ್ನು ನೋಡಿ ನೋಡಿ ತಮ್ಮ ಕಾರನ್ನು ನಿಲ್ಲಿಸಿದ ಸಂಸದರು ಗಾಯಾಳುಗಳನ್ನು ಪರೀಕ್ಷಿಸಿದ್ದಾರೆ.
Crow Astrology: ಕಾಗೆ ಬಂದು ಮನೆ ಮುಂದೆ ಈ ರೀತಿ ಮಾಡಿದರೆ ಏನ್ ಅರ್ಥ ಗೊತ್ತಾ..?
ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ದೂರವಾಣಿ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಸಂಸದರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ. ಗಾಯಾಳುಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಂಸದರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.