ಬೆಂಗಳೂರು:- ಮಹಿಳೆಯೊಬ್ಬರು ತನ್ನಿಬ್ಬರು ಮುದ್ದಾದ ಮಕ್ಕಳನ್ನು ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಹಗ್ಗದಿಂದ ಕುತ್ತಿಗೆಗೆ ಬಿಗಿದು ತನ್ನ ಇಬ್ಬರು ಮಕ್ಕಳಾದ 7 ವರ್ಷದ ಶಂಭು, 3 ವರ್ಷದ ಶಿಯಾ ಳನ್ನ ಕೊಲೆ ಮಾಡಿದ್ದಾಳೆ. ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ, ಸರಿಯಾದ ಸಮಯಕ್ಕೆ ಗಂಡ ಬಂದು ಕಾಪಾಡಿದ್ದಾನೆ
ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದರು. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ದಳು. ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ. ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..
ಅದರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ…ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದರು. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ದಳು. ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ. ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..ಅದರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ…
ಗಲಾಟೆ ಬಳಿಕ ಸಂಜೆ 7.30 ಕ್ಕೆ ಸರಿಯಾಗಿ ಗಂಡ ಸುನಿಲ್ ಸಾಹು ಆಟೋ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದಾನೆ. ಹೀಗೆ ಹೋದವನಿಗೆ 9.45 ರ ಸುಮಾರಿಗೆ ಬಂದ ಅದೊಂದು ಫೋಟೊ ನಿಂತಲ್ಲೇ ನಡುಗುವಂತೆ ಮಾಡಿತ್ತು. ಯಾಕಂದ್ರೆ ಆ ಸೆಲ್ಫಿ ಫೋಟೊ ಅಷ್ಟೊಂದು ಭಯಾನಕವಾಗಿತ್ತು. ಮನೆಗೆ ಬಂದು ನೋಡಿದ ಪತಿ ಸುನೀಲ್ ಗೆ ಕಂಡಿದ್ದು ಮಾತ್ರ ಭಯಾನಕ.
ಇಬ್ಬರು ಮಕ್ಕಳು ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥತಿಯಲ್ಲಿದ್ರೆ ಪತ್ನಿ ಕತ್ತು ಸೀಳಿತ್ತು..ಹಿಂದೂ ಮುಂದು ನೋಡದೆ ಪತ್ನಿಯನ್ನ ಮೊದಲು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾನೆ. ಬಳಿಕ ಏನಾಯ್ತು ಅಂತಾ ತಿಳಿತಿದ್ದಂತೆ ಬೆಚ್ಚಿಬಿದ್ದಿದ್ದ
ಗಂಡನ ಮೇಲಿನ ಕೋಪಕ್ಕೆ ಪತ್ನಿಯೇ ಇಬ್ಬರು ಮಕ್ಕಳನ್ನ ಸೆಣಬಿನ ದಾರದಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ದಾರ ತುಂಡಾಗಿ ಕೆಳಗೆ ಬಿದ್ದಿದ್ದಾಳೆ…ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾಳೆ.
ಅದೃಷ್ಟವಶಾತ್ ಬದುಕಿದ್ದಾಳೆ.