ಉತ್ತರ ಪ್ರದೇಶ: ಇತ್ತೀಚೆಗೆ ವಿವಾಹೇತರ ಸಂಬಂಧಗಳ ಪ್ರಕರಣಗಳು ಜಾಸ್ತಿ ಆಗ್ತಿದ್ದು, ವಿವಾಹಿತ ಪುರುಷ-ಮಹಿಳೆಯರು ಮತ್ತೊಂದು ಸಂಬಂಧ ಹೊಂದಿರುವುದು ಒಂದು ಕಡೆಯಾದ್ರೆ ಮತ್ತೊಂದೆಡೆ ತಮ್ಮ ಪ್ರೇಮಿಗಳ ಜೊತೆ ಓಡಿ ಹೋಗ್ತಿರುವ ಘಟನೆಗಳು ಸಹ ಆಗಾಗ ನಡೆಯುತ್ತಿದೆ. ಇದೀಗ ಇಂತಹುದೇ ಘಟನೆಯೊಂದು ನಡೆದಿದೆ.
ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಾತಾಯಿಯೊಬ್ಬಳು ಭಿಕ್ಷುಕನೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 36 ವರ್ಷದ ಮಹಿಳೆ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ.
ನೀವೇನಾದ್ರೂ ಕುರಿ ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 1 ಲಕ್ಷ ಆದಾಯ ಗಳಿಕೆ ಮಾಡಬಹುದು.! ಹೇಗೆ ಗೊತ್ತಾ..?
ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಾಣಿಸದೇ ಆತಂಕಗೊಂಡ ಪತಿ ರಾಜು ಪೊಲೀಸ್ ಮೊರೆ ಹೋಗಿದ್ದಾರೆ. ತನ್ನ ಪತ್ನಿಯನ್ನು ಯಾರೋ ಅಪಹರಿಸಿದ್ದಾರೆ ಎಂದು ರಾಜು ದೂರು ನೀಡಿದ್ದರು. ಪತಿಯ ದೂರು ಆಧರಿಸಿ ತನಿಖೆಗಿಳಿದ ಪೊಲೀಸರ ಎದುರು ಸತ್ಯದ ಅನಾವರಣವಾಗಿದೆ.
ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ರಾಜೇಶ್ವರಿ ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷುಕನೊಂದಿಗೆ ಪತ್ತೆಯಾಗಿದ್ದಾಳೆ. ಈತ ಭಿಕ್ಷೆಯ ನೆಪದಲ್ಲಿ ಆಗಾಗಾ ಮನೆಯ ಮುಂದೆ ಬಂದು ರಾಜೇಶ್ವರಿ ಜೊತೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಹಿಳೆಗೆ ಈತನ ಮೇಲೆ ಪ್ರೀತಿಯಾಗಿದೆ. ಅಲ್ಲದೇ ಭಿಕ್ಷುಕ ಮೊಬೈಲ್ ಹೊಂದಿದ್ದರಿಂದ ಇಬ್ಬರೂ ಪರಸ್ಪರ ನಂಬರ್ ಶೇರ್ ಮಾಡಿಕೊಂಡು ಮೊಬೈಲ್ನಲ್ಲೇ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.